ಪರಿಚಯ

ಶ್ರೀ ಶಿವಂ ಗುರೂಜಿ

ಶ್ರೀ ಶಿವಂ ಗುರೂಜಿ ಅವರು ರಾಷ್ಟ್ರೀಯ ನಾಡಿ ಜ್ಯೋತಿಷ್ಯ ಪರಿಷತ್ತಿನ ಸಂಸ್ಥಾಪಕರು ಮತ್ತು ಅವರು ಜ್ಯೋತಿಷ್ಯದ ಪ್ರತಿಯೊಂದು ವಿಭಾಗಗಳಲ್ಲಿ ಪ್ರವೀಣರಾಗಿದ್ದಾರೆ. ಬೆಂಗಳೂರಿನಲ್ಲಿ ಜ್ಯೋತಿಷ್ಯ ಕೋರ್ಸ್‌ಗಳು, ಗುರೂಜಿಯವರ ಅನುಭವ ಮತ್ತು ಬೋಧನೆಗಳಿಂದ ಸರಳವಾಗಿದೆ. ಅವರು ಕಠಿಣ ಸಂಶೋಧನೆಯೊಂದಿಗೆ ಮೂರು ಸಾವಿರ ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಸುಮಾರು ಒಂದು ದಶಕದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಇಲ್ಲಿಯ ತನಕ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವಲ್ಲಿ ಶ್ರೀ ಶಿವಂ ಗುರೂಜಿಯವರು ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಶ್ರೀ ಶಿವಂ ಗುರೂಜಿ ಅವರು ಜ್ಯೋತಿಷ್ಯ ಕ್ಷೇತ್ರದಲ್ಲಿ ಭಾರತೀಯ ಮೂಲದ ಸಲಹೆಗಾರರಾಗಿ ಕಲಿಯುವ ಅನೇಕ ಉತ್ಸಾಹಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗವನ್ನು ತೋರಿಸಿದ್ದಾರೆ. ಜ್ಞಾನವನ್ನು ಪಡೆಯುವ ಅವರ ಆಸಕ್ತಿಯ ಪ್ರಾಥಮಿಕ ಹಂತವು ಹತ್ತನೇ ವಯಸ್ಸಿನಲ್ಲಿಯೇ ಪ್ರಾರಂಭವಾಯಿತು ಮತ್ತು ಆ ಆಸಕ್ತಿಯೇ ಮುಂದೆ ಜ್ಯೋತಿಷ್ಯದ ಅಧ್ಯಯನದಲ್ಲಿ ಪರಿಣತಿಯನ್ನು ಸಾಧಿಸುವಲ್ಲಿ ಮುನ್ನುಡಿಯಾಯಿತು.

shivam-about-us-1
shivam about us

Welcome to Shivam Gurukula

ಎಲ್ಲಾ ಧರ್ಮದ ಜನರಿಗೂ ನಮ್ಮ ಶ್ರೀ ಶಿವಂ ಗುರುಕುಲ ಅಧ್ಯಯನ ಕೇಂದ್ರಕ್ಕೆ ಸ್ವಾಗತ

shivam-about-us-3

ಜ್ಯೋತಿಷ್ಯ ಪರಿಹಾರಗಳು

87%

ಪರಿಹಾರಗಳ ಫಲಿತಾಂಶ

85%

ತರಬೇತಿಯ ಗುಣಮಟ್ಟ

98%

ಶಿವಂ ಗುರುಕುಲವು ಎಲ್ಲಾ ಸಮಾಜ ಬಾಂಧವರಿಗೂ ಸಹಕಾರಿಯಾಗಿದೆ, ಉನ್ನತ ಮತ್ತು ದಮನಿತ, ಬಡ ಮತ್ತು ಶ್ರೀಮಂತರು. ಸಾಮಾನ್ಯ ವ್ಯಕ್ತಿಗಳಿಂದ ಪ್ರಬಲ ರಾಜಕಾರಣಿಗಳು, ವ್ಯಾಪಾರಿಗಳು, ಸರ್ಕಾರಿ ಕಾರ್ಯಕರ್ತರು, ಸೈನ್ಯದ ಸೇವಕರು, ವೈದ್ಯರು ಮತ್ತು ರೈತರು ಸಹ, ಗುರೂಜಿಯವರ ಆಶೀರ್ವಾದವನ್ನು ಬಯಸಿ ಬರುತ್ತಾರೆ. ಶ್ರೀ ಶಿವಂ ಗುರುಜಿಯವರು ಎಲ್ಲರಿಗೂ ಸಮಾನವಾಗಿ ಆಶೀರ್ವದಿಸಿ ಹರಸುತ್ತಾರೆ. ಕಷ್ಟಗಳ ಎದುರು ಧಿಕ್ಕೆಟ್ಟು ನಿಂತು ತಲ್ಲಣಿಸುವ ಪ್ರತಿಯೊಬ್ಬರಿಗೂ ಸರಿಯಾಗಿ ಮಾರ್ಗದರ್ಶನ ನೀಡಿ ಧ್ಯರ್ಯ ತುಂಬಲು ಶಿವಂ ಗುರುಕುಲವು ಸ್ವಾಗತಿಸುತ್ತದೆ.

 

Way of Shivam Gurukula

ಗುರುಕುಲದ ಹಿನ್ನೆಲೆ ಮತ್ತು ನಡೆದು ಬಂದ ದಾರಿ

 • 1

  ಈ ಗುರುಕುಲವು ವೈದಿಕ ಪದ್ಧತಿಯಲ್ಲಿ ಹಿಂದಿನ ಕಾಲದ ಗುರುಕುಲದ ಪದ್ಧತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಶಾಸ್ತ್ರಗಳನ್ನು ಹೇಳಿಕೊಡುವ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ.

 • 2

  ಇಲ್ಲಿ ಹೇಳಿಕೊಡುವ ಎಲ್ಲಾ ವಿದ್ಯೆಯು ಸಹ ಆಧುನಿಕ ವೈಜ್ಞಾನಿಕ ಮತ್ತು ಸಾಮಾಜಿಕ ಹಾಗೂ ಶಾಸ್ತ್ರೀಯ ಸಂಪ್ರದಾಯ ಪದ್ಧತಿಗಳನ್ನು ಅನುಸರಿಸಲಾಗುತ್ತದೆ.
 • 3

  ಈ ಗುರುಕುಲವು ಕೇವಲ ಬೆಂಗಳೂರಿಗೆ ಅಲ್ಲದೆ ಕರ್ನಾಟಕದಾದ್ಯಂತ ತನ್ನ ವಿದ್ಯಾರ್ಥಿಗಳನ್ನು ಬೆಳೆಸಿಕೊಂಡು ಬಂದಿದೆ.
 • 4

  ಶಿವಂ ಗುರೂಜಿಯವರು ಕೇವಲ ವಿದ್ಯೆಯನ್ನು ಹೇಳಿಕೊಡುವುದಲ್ಲದೆ ವಿದ್ಯಾರ್ಥಿಗಳ ಮಾನಸಿಕ ಬದಲಾವಣೆಗಳು ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳು ಹಾಗೂ ಕೌಟುಂಬಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚುಒತ್ತು ಕೊಡುತ್ತಾರೆ.

ಉತ್ಸಾಹಿ ಅನುಯಾಯಿಗಳು

ಶ್ರೀ ಶಿವಂ ಗುರಿಜೀಯವರ ವ್ಯಾಪಕವಾದ ಜ್ಞಾನ, ಅಧ್ಯಾತ್ಮ ಮಾರ್ಗದರ್ಶನ ಮತ್ತು ನಿಖರವಾದ ಭವಿಷ್ಯವಾಣಿಗಳಿಗಾಗಿ, ಪ್ರಪಂಚದ ವಿವಿಧ ಪ್ರದೇಶಗಳ ಅನುಯಾಯಿಗಳಿಂದ ಅವರಿಗೆ ಅಪಾರ ಗೌರವವು ಲಭಿಸಿದೆ. ಅನುಯಾಯಿಗಳಲ್ಲಿ ಹೆಸರಾಂತ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಚಲನಚಿತ್ರದಲ್ಲಿನ ಸೆಲೆಬ್ರಿಟಿಗಳು, ಕಾರ್ಪೊರೇಟ್ ಮತ್ತು ವ್ಯಕ್ತಿಗಳು ಸೇರಿದ್ದಾರೆ.

ಗುರೂಜಿ ವಿವಿಧ ವಯೋಮಾನದ ಅನುಯಾಯಿಗಳನ್ನು ಹೊಂದಿದ್ದಾರೆ. ಇಂದು ಯುವಕರು ಜ್ಯೋತಿಷ್ಯದಲ್ಲಿ ಈ ನಿಖರವಾದ ಮುನ್ಸೂಚನೆಯ ವಿಧಾನವನ್ನು ಕಲಿಯಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಗುರೂಜಿ ಅವರು ಪ್ರತಿಯೊಬ್ಬ ಆಸಕ್ತ ವ್ಯಕ್ತಿಗಳಿಗೆ ವಿವಿಧ ಬ್ಯಾಚ್‌ಗಳ ಸಮಯಗಳಲ್ಲಿ ತರಗತಿಗಳನ್ನು ನಡೆಸುವಲ್ಲಿ ಅವರಿಗೆ ಹೆಚ್ಚಿನ ಗಮನವನ್ನು ಒದಗಿಸಿದ್ದಾರೆ. ಜ್ಯೋತಿಷ್ಯ ಕಲಿಕೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಛಾಪು ಮೂಡಿಸಲು ಸಂಪೂರ್ಣವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಕೋರ್ಸ್ ಪೂರ್ಣಗೊಂಡಾಗ, ವಿದ್ಯಾರ್ಥಿಗಳ ಜ್ಞಾನದಲ್ಲಿ ದೃಢವಾದ ಹಿಡಿತದೊಂದಿಗೆ ವಿಷಯವನ್ನು ಕರಗತ ಮಾಡಿಕೊಳ್ಳಲು ಗುರೂಜಿಯವರು ಸ್ಪಷ್ಟ ದಾರಿ ಕಂಡುಕೊಳ್ಳಲು ಸರ್ವ ಪ್ರಯತ್ನವನ್ನು ಮಾಡುತ್ತಾರೆ.

ಭವಿಷ್ಯದ ಮಾರ್ಗ ದೃಷ್ಟಿ

ಮೇಲೆ ತಿಳಿಸಿದ ದೃಷ್ಟಿಯಂತೆ, ನಾವು ಭವಿಷ್ಯದ ಚಿಂತಕರು. ಪ್ರತಿಯೊಬ್ಬ ಕಲಿಯುವವರು ಭವಿಷ್ಯದ ಚಿಂತನೆಯಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳಬಹುದು ಆದ್ದರಿಂದ ಒಬ್ಬರ ವೃತ್ತಿಜೀವನವನ್ನು ಅಗಾಧವಾದ ಜ್ಞಾನ ಸಂಪಾದನೆಯೊಂದಿಗೆ ಸ್ಪಷ್ಟ ಹಂತವನ್ನಾಗಿ ಮಾಡಬಹುದು. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನೀವು ಸ್ವತಂತ್ರವಾಗಿ ನಾಡಿ ಜ್ಯೋತಿಷ್ಯವನ್ನು ಅಭ್ಯಾಸ ಮಾಡಬಹುದು. ನಮ್ಮ ಬೋಧನೆಗಳೊಂದಿಗೆ ನಿಮ್ಮ ಭವಿಷ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸಬಹುದು.

ಪ್ರತಿಯೊಬ್ಬ ಉತ್ಸಾಹಿಗಳಿಗೆ ಅವರ ಜಾತಕದ ಸರಿಯಾದ ಅಧ್ಯಯನದೊಂದಿಗೆ ನಾವು ಜ್ಯೋತಿಷ್ಯ ಸಲಹೆಯನ್ನು ನೀಡುತ್ತೇವೆ. ವೃತ್ತಿಜೀವನದ ವಿವಿಧ ಕ್ಷೇತ್ರಗಳಲ್ಲಿನ ಅನೇಕ ವ್ಯಕ್ತಿಗಳು ನಮ್ಮ ವಿಶ್ಲೇಷಣೆ ಮತ್ತು ಸಲಹೆಗಳಿಂದ ಪ್ರಯೋಜನ ಪಡೆದಿದ್ದಾರೆ.