Lalitha Sahasranama
Training Online / offline
Lalitha Sahasranama
ಶ್ರೀ ಲಲಿತಾ ಸಹಸ್ರನಾಮ
ಶ್ರೀ ಲಲಿತಾ ಸಹಸ್ರನಾಮ ಪಠಿಸೋದು ಹೇಗೆ..?
ಶ್ರೀ ಲಲಿತಾ ಸಹಸ್ರನಾಮವನ್ನು ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ ಕಲಿಯಿರಿ. ಸಹಸ್ರನಾಮದ ಪಾರಾಯಣವನ್ನು ಹೇಗೆ ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂದು ಅರ್ಥಸಹಿತವಾಗಿ ನಿಮಗೆ ಗುರೂಜಿಯವರು ತಿಳಿಸಿಕೊಡಲಿದ್ದಾರೆ.
ಪಾರಾಯಣವನ್ನು ಆರಂಭಿಸುವ ಮುನ್ನ ನೀವು ಉಚ್ಛಾರಣೆಯಲ್ಲಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದು ಕೂಡಾ ಬಹಳ ಮುಖ್ಯವಾಗಿದೆ. ಒಂದೊಮ್ಮೆ ನಿಮಗೆ ಇಂತಹ ಸಮಸ್ಯೆ ಎದುರಾಗುತ್ತದೆ ಎಂದು ಗೊತ್ತಾದರೆ ಗುರೂಜಿಯವರಿಂದ ಮಾರ್ಗದರ್ಶನವನ್ನು ಪಡೆದು ಸರಿಯಾಗಿ ಓದುವುದು ಹೆಚ್ಚು ಫಲಪ್ರಧಾಯಕ.
ಸಹಸ್ರನಾಮ ಪಠಿಸುವುದರಿಂದ ಆಗುವ ಲಾಭಗಳು:
ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಭಗವಂತನ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.
1
ವಿಷ್ಣುವನ್ನು ಸಹಸ್ರ ಬಾರಿ ಜಪಿಸಿದ ಪುಣ್ಯ
2
ಶತ್ರುಗಳಿಂದ ಉಂಟಾಗುವ ತೊಂದರೆಯನ್ನು ನಿವಾರಿಸುವ ಶಕ್ತಿ
3
ನಪುಂಸಕತ್ವ ದೋಷವು ನಿವಾರಣೆಯಾಗಿ ಮಕ್ಕಳಾಗುತ್ತದೆ
4
ದಾನ-ಧರ್ಮ ಮಾಡಿದ ಪುಣ್ಯಫಲ ಸಿಗುತ್ತದೆ.
ಲಲಿತಾ ಸಹಸ್ರನಾಮವನ್ನು ಪಠಿಸುವ ವಿಧಾನ:
- ಸಹಸ್ರನಾಮ ಪಠಿಸುವ ಸಮಯ
- ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು.
- ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು.
- ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಪಠಿಸಬೇಕು.
- ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.
- ದೇವಿಯು ನಿಮ್ಮನ್ನೇ ನೋಡುತ್ತಿದ್ದಾಳೆಂದು ಎಣಿಸಿ ಮಂತ್ರವನ್ನು ಪಠಿಸಿ.
- ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿ
- ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
- ಮಂತ್ರದ ಅರ್ಥವನ್ನು ತಿಳಿದುಕೊಂಡು ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.
- ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಬೇಕು.
ಲಲಿತಾ ಸಹಸ್ರನಾಮದ ಪ್ರಯೋಜನಗಳು.
- ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ.
- ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ.
- ನೀವು ಎಷ್ಟು ಬಾರಿ ಲಲಿತಾ ಸಹಸ್ರನಾಮವನ್ನು ಜಪಿಸುತ್ತೀರೋ ಅಷ್ಟು ಬಾರಿ ಶುಭ ಫಲಿತಾಂಶವನ್ನು ಪಡೆಯುವಿರಿ. ಶ್ರೀ ಲಲಿತಾ ಸಹಸ್ರನಾಮ ಅರ್ಚನೆಗೆ ಬಳಸಿದ ವಿಭೂತಿಯನ್ನು ಹಣೆಗೆ ಹಚ್ಚುವುದರಿಂದ ಕೂಡ ಜ್ವರ ಮತ್ತು ತಲೆನೋವು ಕಡಿಮೆಯಾಗುತ್ತದೆ.
- ಶ್ರೀ ಲಲಿತಾ ಸಹಸ್ರನಾಮವನ್ನು ನಿಯಮಿತವಾಗಿ ಪಠಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ನರಗಳು ಉತ್ತೇಜನಗೊಳ್ಳುತ್ತದೆ. ಮತ್ತು ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ.
- ಶ್ರೀ ಲಿಲತಾ ಸಹಸ್ರನಾಮವನ್ನು ನಿಯಮಿತವಾಗಿ ಜಪಿಸುವ ವ್ಯಕ್ತಿಯನ್ನು ಲಲಿತಾ ದೇವಿಯು ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ.
- ಕುಟುಂಬದಲ್ಲಿ ಏಕತೆ, ಶಾಂತಿ, ಸ್ಪಷ್ಟ ಮನಸ್ಸು ಮತ್ತು ಸಮೃದ್ಧಿ ನೆಲೆಯಾಗುತ್ತದೆ.
ನಿತ್ಯ ಪಠಿಸುವುದರಿಂದ ಆಗುವ ಲಾಭಗಳು
- ದಾನ-ಧರ್ಮಗಳನ್ನು ಮಾಡಿದ್ದರಿಂದಾಗಿ ಬರುವ ಪುಣ್ಯ ಪ್ರಾಪ್ತಿಯಾಗುತ್ತದೆ
- ನಿತ್ಯ ಪಠಣ ಘೋರ ತಪಸ್ಸಿಗೆ ಸಮವೆಂದು ಹೇಳುತ್ತಾರೆ.
- ಧಾರ್ಮಿಕ ವಿಧಿವಿಧಾನಗಳಿಂದ ಈ ಮಂತ್ರವನ್ನು ಪಠಿಸಿದರೆ ಜ್ವರ ಶಮನವಾಗುತ್ತದೆ ಎಂಬ ನಂಬಿಕೆ ಇದೆ.
- ವಿಷಕ್ಕೆ ಸಂಬಂಧಿಸಿದ ಯಾವುದೇ ರೋಗವಿದ್ದರೂ ಗುಣವಾಗುತ್ತದೆ ಎಂಬ ಪ್ರತೀತಿ ಇದೆ
- ಯಾವುದೇ ದುಷ್ಟ ಶಕ್ತಿಯಿಂದಾಗುವ ತೊಂದರೆ ನಿವಾರಣೆ ಯಾಗುತ್ತದೆ
- ದೇಹದ ನರನಾಡಿಗಳ ಕಾರ್ಯ ಚುರುಕಾಗುತ್ತದೆ. ಶರೀರದ ಸುಪ್ತ ಚೈತನ್ಯವನ್ನು ಜಾಗೃತಗೊಳಿಸುತ್ತದೆ
- ಜೀವನಕ್ಕೆ ಬೇಕಾಗುವ ಎಲ್ಲ ಸಿರಿ ಸಂಪತ್ತನ್ನು ದಯ ಪಾಲಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ರತ್ನ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು ಅಧ್ಯಯನ ಮಾಡಿ, ಸ್ವತಃ ನೀವೇ ರತ್ನ ಜ್ಯೋತಿಗಳಾಗಬಹುದು.
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
EXCELLENT Based on 210 reviews Posted on Shankaranandaswamy18 September 2025Trustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela Kuppuswamy18 September 2025Trustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Posted on Shashikala Solanki18 September 2025Trustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವPosted on sunish shetty18 September 2025Trustindex verifies that the original source of the review is Google. ಓಂ ಶ್ರೀ ಗುರುಭ್ಯೋ ನಮಃ ಶಿವಂ ಗುರುಕುಲದಲ್ಲಿ ನಾನು ಲಲಿತ ಸಹಸ್ರನಾಮವನ್ನು ಕಲಿತೆ. ತುಂಬಾ ಗ್ರೇಸ್ ಫುಲ್ ಎನರ್ಜಿ. ಸಂಸಾರದಲ್ಲಿ ಪ್ರೀತಿ ಮಾಧುರ್ಯತೆ ಹೆಚ್ಚಾಗಿದೆ. ಸಮಾಧಾನ, ಆತ್ಮಸ್ಥೈರ್ಯ, ಆರೋಗ್ಯದಲ್ಲಿ ಬದಲಾವಣೆ, ಶಾಂತತೆ, ಮೌನ ಹೆಚ್ಚಾಗಿದೆ. ಎಲ್ಲಾ ಸಿಚುವೇಶನ್ ವಿನ್ ಆಗುವ ಅಗತ್ಯ ಇಲ್ಲ. ಎಲ್ಲಾ ಕಡೆ ಉತ್ತರ ಕೊಡುವ ಅಗತ್ಯ ಇಲ್ಲ ಎಂಬುದು ಅರ್ಥವಾಗಿದೆ. ಅವಕಾಶ ಒದಗಿಸಿದ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳುPosted on Chandrakala Aravind navada18 September 2025Trustindex verifies that the original source of the review is Google. Lalitha sahasranama made my life so beautiful that after chanting lalitha sahsranama trikaala directly it connected to devi maa tripura sundari and she blessing me so beautifully whatever I will ask her she is fulfilling my desire especially which is dharmabadda( korikegallanella)desire. Iam really greatfull to my guruji and maa lalitha tripura sundari...thank you guruji mom made my life so beautiful...Posted on yantra vidwan Anu Nagesh18 September 2025Trustindex verifies that the original source of the review is Google. ಗುರುಗಳೆ ಶ್ರೀ ಚಕ್ರ 48 ದಿನ ರಚನೆಯಿಂದ ನಂಗೆ ತುಂಬಾ ಒಳ್ಳೇದಾಗಿದೆ ಗುರುಗಳೆ.. ನಂಗೆ auto immunity ಇರೋದ್ರಿಂದ gastric tablets compulsory, ಕಳೆದ 15 ವರ್ಷದಿಂದ ತಂಗೊಂತ ಇದ್ದೀನಿ.. ಆದ್ರೆ ಮತ್ತೇ ರಾತ್ರಿ ಎದೆ ಉರಿ start ಆಗ್ತಾ ಇತ್ತು. ಆದ್ರೆ ಶ್ರೀ ಚಕ್ರ ರಚನೆಯಿಂದ ರಾತ್ರಿ ಹೊತ್ತು ಎದೆ ಉರಿ ಕಡಿಮೆಯಾಗಿದೆ. ಹಾಗೆ ನನ್ನ ಯಜಮಾನರಿಗೆ ಧನಲಾಭ ಆಗಿದೆ 🙏🙏 ಒಟ್ಟು ಒಳ್ಳೇದಾಗಿದೆ ಗುರುಗಳೆ. ಧನ್ಯವಾದಗಳು 🙏Posted on Prasannakumar C12 September 2025Trustindex verifies that the original source of the review is Google. ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅತ್ಯುತ್ತಮ ತರಭೇತಿ ಕೇಂದ್ರPosted on roopa v12 July 2025Trustindex verifies that the original source of the review is Google. ಒಳ್ಳೆ ರೀತಿಯ training ಕೊಡುತ್ತಾರೆ, ಅವರು ಹೇಳಿ ಕೊಡುವ ರೀತಿ ನನಗೆ ತುಂಬಾ ಇಷ್ಟ ಆಯ್ತು.responses ತುಂಬಾ ಚೆನ್ನಾಗಿದೆPosted on Shilpi kotreshacharya8 July 2025Trustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿ

