Untitled-15

ಮಾಸಗಳು

ಚಾಂದ್ರಮಾನ ಮಾಸಗಳು
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (12) ಮಾಸಗಳನ್ನು ಕೆಳಗೆ ನೀಡಿವೆ.

01. ಚೈತ್ರ (ಚಿತ್ರ/ಚಿತ್ತ); 2. ವೈಶಾಖ (ವಿಶಾಖ); 3. ಜ್ಯೇಷ್ಠ (ಜ್ಯೇಷ್ಠ); 4. ಆಷಾಢ (ಆಷಾಢ)5. ಶ್ರಾವಣ (ಶ್ರವಣ); 6. ಭಾದ್ರಪದ (ಭದ್ರ); : 7. ಆಶ್ವೀಜ (ಅಶ್ವಿನಿ); 8. ಕಾರ್ತೀಕ (ಕೃತ್ತಿಕ/ಕೃತ್ತಿಕೆ) 09. ಮಾರ್ಗಶಿರ (ಮೃಗಶಿರ); 10. ಪುಷ್ಯ (ಪುಷ್ಯ/ಪುಬ್ಬ); 11. ಮಾಘ (ಮಘ/ಮಖ); 12. ಫಾಲ್ಗುಣ (ಫಾಲ್ಗುಣಿ)

ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ.

ಉದಾಹರಣೆಗೆ,

ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.


ಮಲಮಾಸ : ಅಧಿಕಮಾಸ ಅಥವಾ ಕ್ಷಯಮಾಸ
ಶುದ್ಧಮಾಸ : ಒಂದು ಮಾಸವು 02 ಸಲ ಬಂದಾಗ ಮೊದಲ ಮಾಸವನ್ನು ಅಧಿಕಮಾಸವೆಂದೂ ಎರಡನೆಯ ಅದೇ ಮಾಸವನ್ನು ಶುದ್ಧಮಾಸವೆಂದು ಕರೆಯುತ್ತಾರೆ.

ಸೌರಮಾನ ಮಾಸಗಳು
ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.

೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ ೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ

ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.

ಋತುಗಳು 06 (2 ಮಾಸಗಳಿಗೆ ಒಂದು ಋತು)
1. ವಸಂತ ಋತು (ಚೈತ್ರ – ವೈಶಾಖ)
2. ಗ್ರೀಷ್ಮ ಋತು (ಜ್ಯೇಷ್ಠ – ಆಷಾಢ)
3. ವರ್ಷ ಋತು (ಶ್ರಾವಣ – ಭಾದ್ರಪದ)
4. ಶರದೃತು (ಆಶ್ವೀಜ – ಕಾರ್ತೀಕ)
5. ಹೇಮಂತ ಋತು (ಮಾರ್ಗಶಿರ – ಪುಷ್ಯ)
6. ಶಿಶಿರ ಋತು (ಮಾಘ – ಪಾಲ್ಗುಣ)

Tags: No tags

Add a Comment

Your email address will not be published. Required fields are marked *