image-1

ಅತೀಂದ್ರಿಯ ಶಕ್ತಿಗಳೊಡನೆ ಮನುಷ್ಯನ ಸಂಪರ್ಕ-ಶ್ರೀ ಮಧು ಚಿನ್ನಪ್ಪ

ಮನುಷ್ಯ ತನ್ನ ಕಣ್ಣಿಗೆ ಕಾಣುವ ಶರೀರವನ್ನು ಹೊರತುಪಡಿಸಿ ಇನ್ನು ಹಲವು ಸೂಕ್ಷ್ಮ ಶರೀರಗಳನ್ನು ಹೊಂದಿರುತ್ತಾನೆ, ಈ ಐಹಿಕ ಪ್ರಪಂಚದಲ್ಲಿ ತಾನು ದೈಹಿಕವಾಗಿ ಮಾಡುವಂತಹ ಕೆಲಸಗಳಿಗಾಗಿ ಪಂಚಭೂತಾತ್ಮಕವಾದಂತ ಈ ಪ್ರಪಂಚದಲ್ಲಿ ಯಾವುದನ್ನಾದರೂ ಮಾಡಲು ಅಥವಾ ಅನುಭವಿಸಲು ಅನುಭವಕ್ಕೆ ತಂದುಕೊಳ್ಳಲು ಪಂಚಭೂತತ್ಮಕವಾದಂತ ರಕ್ತ ಮಾಂಸಗಳಿಂದ ರಚಿತಲ್ಪಟ್ಟ ಅನ್ನಮಯವಾದ ಆಹಾರದಿಂದ ಖುಷಿಸಲ್ಪಟ್ಟ ಈ ಶರೀರವನ್ನು ಉಪಯೋಗಿಸುತ್ತಾನೆ.

ಆದರೆ ತನ್ನ ಕಣ್ಣುಗಳಿಗೆ ದೇಹಕ್ಕೆ ಅನುಭವವಾಗದೆ ಇರುವಂತಹ ಎಷ್ಟು ಶಕ್ತಿಗಳು ಈ ಭೂಮಿ ಮೇಲೆ ಇರುತ್ತದೆ ಅಂತ ಶಕ್ತಿಗಳನ್ನು ತನ್ನ ಅನುಭವಕ್ಕೆ ತಂದುಕೊಳ್ಳಲು ಮನುಷ್ಯನು ತನ್ನ ಅನ್ನಮಯ್ಯ ಕೋಶವನ್ನು ಮೀರಿ ಮುಂದೆ ಸಾಗಿ ಮನೋಮಯ ಕೋಶವನ್ನು ತಲುಪ ಬೇಕಾಗಿರುತ್ತದೆ.

ಇದು ಸಾಮಾನ್ಯ ಮನುಷ್ಯರಿಗೆ ನಿದ್ರೆಯಲ್ಲೂ, ಆಳವಾದ ಧ್ಯಾನ ಪೂಜೆ ಮಾಡುವ ಸಮಯದಲ್ಲೂ ಅನುಭವಕ್ಕೆ ಬರುತ್ತದೆ ಆದರೆ ಕೆಲವೊಂದು ಮನುಷ್ಯರಿಗೆ ತಾವು ಹಿಂದಿನ ಜನ್ಮದಲ್ಲಿ ಮಾಡಿರತಕ್ಕಂತ ಅಗಾಧವಾದ ಸಾಧನೆ ಜಪ-ತಪಗಳಿಂದ ಅದು ಈ ಜನ್ಮಕ್ಕೆ ಬಂದಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರಿಗೂ ಅವರಿಗೆ ತಿಳಿಯದ ಹಾಗೆ ರಹಸ್ಯವಾಗಿ ಉಳಿದಿರುತ್ತದೆ.

ಹಿಂದಿನ ಜನ್ಮದಲ್ಲಿ ಅಪೂರ್ಣವಾದ ಸಾಧನೆ ಅಥವಾ ಆ ಸಾಧನೆಯ ಫಲವನ್ನು ಪ್ರಕೃತಿ ವಿರುದ್ಧವಾಗಿ ಬಳಸಿದಾಗ ಅವರು ಈ ಜನ್ಮದಲ್ಲಿ ಅದನ್ನು ಮರೆತಿರುತ್ತಾರೆ ಆದರೆ ಅವರ ಮನೋಮಯ ಕೋಶದಲ್ಲಿ ಹಿಂದಿನ ಜನ್ಮದ ಸಾಧನೆ ಫಲ ಹಾಗೆ ಉಳಿದಿರುತ್ತದೆ ಅವರ ಮನೋಮಯ ಕೋಶವು ಈ ವಿಚಾರಗಳಿಗೆ ಸದಾ ತೆರೆದುಕೊಂಡಿರುತ್ತದೆ ಮತ್ತು ಪ್ರಕೃತಿಯಲ್ಲಿನ ಅಂತಹ ಶಕ್ತಿಯನ್ನು ಅದು ಆಹ್ವಾನಿಸುತ್ತಿರುತ್ತದೆ ಅಥವಾ ಅದರಿಂದ ಪ್ರಚೋದಿಸಲ್ಪಡುತ್ತದೆ.

ಅವರ ಹಿಂದಿನ ಜನ್ಮದ ಸಾಧನೆಯ ಫಲದಿಂದ ಈ ಜನ್ಮದಲ್ಲಿ ಅವರು ಕೇವಲ ಸಂಕಲ್ಪದಿಂದ ಚಿಕ್ಕ ಪುಟ್ಟ ಮಂತ್ರಗಳ ಉಚ್ಚಾರದಿಂದ ಆ ಶಕ್ತಿಯನ್ನು ಪ್ರೇರೇಪಿಸಿ ಅವುಗಳಿಗೆ ನಿರ್ದಿಷ್ಟ ಆಕಾರ ಮತ್ತು ಗುರಿಯನ್ನು ನೀಡಿ ಈ ಜನ್ಮದಲ್ಲಿ ವ್ಯಕ್ತಿಯು ತಮ್ಮ ನಿಶ್ಚಿತ ಕಾರ್ಯಗಳನ್ನು ಪೂರೈಸಿಕೊಳ್ಳಬಹುದು

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೋವಮಯ ಕೋಶವನ್ನು ನಾವು ಚಂದ್ರರಿಗೆ ಹೋಲಿಸುತ್ತೇವೆ ಹಾಗೂ ಹಿಂದಿನ ಜನ್ಮದ ಕರ್ಮಫಲಗಳನ್ನು ಹೊತ್ತು ತಂದಿರುವಂತಹ ಗ್ರಹಗಳಾದ ರಾಹು-ಕೇತುರವರು ಎಂದು ತಿಳಿಯುತ್ತೇವೆ. ಇಲ್ಲಿ ರಾಹು ಕೇತುರವರು ಚಂದ್ರರಿಗೆ ಸಂಯೋಗವಾದಾಗ ತಮ್ಮ ಹಿಂದಿನ ಜನ್ಮದ ಕರ್ಮಫಲಗಳನ್ನು ಸಹ ನೇರವಾಗಿ ಮನೋಮಯ ಕೋಶಕ್ಕೆ ತಲುಪಿಸಿರುತ್ತಾರೆ. ಇದರಿಂದ ಈ ಜನ್ಮದಲ್ಲಿ ಜಾತಕರ ಮನೋಮಯ ಕೋಶವು ಇಂತಹ ವಿಚಾರಗಳಿಗೆ ಸದಾ ತೆರೆದಿರುತ್ತದೆ ಇದರಲ್ಲಿಯೂ ಸಹ ಎರಡು ವಿಧಗಳಾಗಿ ಇರುತ್ತದೆ

1. ದುಷ್ಟ ಶಕ್ತಿಗಳು ಅಥವಾ ದುಷ್ಟಾತ್ಮಗಳು

ಇಂತಹ ಶಕ್ತಿಗಳು ಅಥವಾ ಆತ್ಮಗಳು ಜಾತಕರಲ್ಲಿ ಚಂದ್ರರಿಗೆ ರಾಹುರವರ ನೇರ ಸಂಯೋಗ ಉಂಟಾದಾಗ ಇಂತಹ ಶಕ್ತಿಗಳು ಜಾತಕರನ್ನು ನೇರವಾಗಿ ಪ್ರೇರೇಪಿಸುತ್ತವೆ ಹಾಗೂ ಜಾತಕರು ಸಹ ಇಂತಹ ಶಕ್ತಿಗಳಿಂದ ಸದಾ ಅನುಭವಸ್ಥರಾಗಿರುತ್ತಾರೆ.

ಕೆಲವೊಂದು ಸಂದರ್ಭದಲ್ಲಿ ಅಜ್ಞಾನದಿಂದ ಅವರಿಗೆ ಏನಾಗುತ್ತಿರುತ್ತದೆ ಎಂದು ತಿಳಿಯುವುದಿಲ್ಲ, ಅವರು ತ್ರಿಸಂಧ್ಯ ಕಾಲಗಳಲ್ಲಿ ಬಯಲು ಪ್ರದೇಶಗಳಿಗೆ ಅಥವಾ ಮನೆಯಿಂದ ಹೊರಗಡೆ/ವಾಸ ಪ್ರದೇಶಗಳಿಂದ ಹೊರಗಡೆ ಹೋದಾಗ ಇದರಿಂದ ಪಿಡಿತರು ಅಥವಾ ಅನುಭವಸ್ಥರಾಗುತ್ತಾರೆ.

ಇವರು ಹಿಂದಿನ ಜನ್ಮದಲ್ಲಿ ತಾಮಸಿಕ ಹಾದಿಯಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದು ರಾಹುರವರು ತಮ್ಮ ಹಿಂದಿನ ಜನ್ಮದ ಸಾಧನೆಯ ಫಲಗಳನ್ನು ಈ ಜನ್ಮದಲ್ಲಿ ಹೊತ್ತು ತಂದು ಮನೋಮಯ ಕೋಶವಾದ ಚಂದ್ರರಿಗೆ ಕೊಟ್ಟಿರುತ್ತಾರೆ ಇದರಿಂದ ಜಾತಕರ ಮನೋಮಯಕೋಶವು ಇಂತಹ ಶಕ್ತಿಗಳಿಗೆ ಸದಾ ತೆರೆದುಕೊಂಡು ತೆರೆದುಕೊಂಡಿರುತ್ತದೆ.

ಇಂತಹ ಸಂಯೋಗ ಇರುವಂತ ವ್ಯಕ್ತಿಗಳು ಸರ್ಪಗಳಿಗೆ ಹೆಚ್ಚು ಸಂವೇದನಾಶೀಲರಾಗಿದ್ದು ಸರ್ಪಗಳು ಕೂಡ ಇವರಿಗೆ ಪ್ರತಿಕ್ರಿಸುತ್ತಿರುತ್ತದೆ ಇವರ ಕನಸುಗಳಲ್ಲಿ ಹೆಚ್ಚು ಸರ್ಪಗಳು ಕಾಣಿಸಿಕೊಳ್ಳುವುದು ಅಥವಾ ಇವರು ಹೋದ ಕಡೆಗಳಲ್ಲಿ ಸರ್ಪಗಳು ಕಾಣಿಸಿಕೊಳ್ಳುವುದು ನಡೆಯುತ್ತಿರುತ್ತದೆ.

ಇವರು ಈ ಜನ್ಮದಲ್ಲಿ ಕೇವಲ ಸಂಕಲ್ಪಿಸಿದ್ದಲ್ಲಿ ಅಥವಾ ಇವರಿಗೆ ತೋಚಿದ ಮಂತ್ರಗಳನ್ನು ಜಪಿಸುದ್ದಲ್ಲಿ ಇಂತಹ ಶಕ್ತಿಗಳು ಪ್ರಚೋದನೆಗೊಳ್ಳುತ್ತವೆ ಇವರ ಬಳಿ ಬರುತ್ತವೆ.

ಇವರು ತಮಗೆ ಏನಾದರೂ ಕಾರ್ಯ ಆಗಬೇಕಾದರೆ ಅಥವಾ ಕಷ್ಟಗಳಿಗೆ ಸಿಲುಕಿಕೊಂಡಾಗ ಇವರು ಕಣ್ಮುಚ್ಚಿ ಮನಸ್ಸಿನಲ್ಲಿ ಯಾವುದೋ ಇಂತಹ ಶಕ್ತಿ ಬಂದು ತನ್ನನ್ನು ಆಶೀರ್ವದಿಸುತ್ತಿರುವ ಹಾಗೆ ತನ್ನ ಕಾರ್ಯ ಸಂಕಲ್ಪ ಸಿದ್ಧಿ ಹೊಂದಿದ ಹಾಗೆ ನೆನೆಸಿದರು ಕೂಡ ಇಂತಹ ಆತ್ಮಗಳು ಅಥವಾ ಶಕ್ತಿ ಬಂದು ಅವರ ಕಾರ್ಯವನ್ನು ಪೂರ್ಣ ಮಾಡಿಕೊಡುತ್ತದೆ

ಈ ಶಕ್ತಿ ಅಥವಾ ಈ ಆತ್ಮಗಳಿಗೆ ತಮ್ಮ ಆಯಾಮದಲ್ಲಿ ಯಾವುದೇ ನಿರ್ಬಂಧಗಳು ಕಾನೂನು ಚೌಕಟ್ಟುಗಳು ಇರುವುದಿಲ್ಲ ಇವು ತಮಗೆ ಇಷ್ಟ ಬಂದ ಹಾಗೆ ವರ್ತಿಸುತ್ತಿರುತ್ತದೆ ಜಾತಕನ ಸಂಕಲ್ಪಿತ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಯಾವುದೇ ಒಂದು ದಾರಿಯಿಂದ ಮಾಡುತ್ತದೆ.

ಈ ಜನ್ಮದಲ್ಲಿ ಇವರಿಗೆ ಇದರ ಜ್ಞಾನ ಇಲ್ಲದೆ ಇರುವುದರಿಂದ ಇದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ಇವರಿಗೆ ತಿಳಿದಿರುವುದಿಲ್ಲ ಇದನ್ನು ಕೆಟ್ಟ ಸಂಕೇತವೆಂದು ತಿಳಿದು ಭಯಪಡುತ್ತಿರುತ್ತಾರೆ, ಇದು ಭಯಪಡುವ ಅವಶ್ಯಕತೆ ಇಲ್ಲ ಸೂಕ್ತ ಜ್ಞಾನದಿಂದ ತಮ್ಮ ಅಜ್ಞಾನವನ್ನು ಹೋಗಲಾಡಿಸಿಕೊಂಡು ಇದನ್ನು ಒಳ್ಳೆಯ ರೀತಿ ಬಳಸಿಕೊಳ್ಳಬಹುದು.

2.ದೈವಿಕ ಶಕ್ತಿ ಅಥವಾ ದೈವಿಕ ಆತ್ಮಗಳು

ಇಂತಹ ಶಕ್ತಿಗಳು ಜಾತಕನ ಹಿಂದಿನ ಜನ್ಮದಲ್ಲಿ ಸಾತ್ವಿಕ ದಾರಿಯಲ್ಲಿ ಸಾಧನೆ ಜಪ-ತಪಗಳನ್ನು ಮಾಡಿದಲ್ಲಿ ಮತ್ತು ಹಿಂದಿನ ಜನ್ಮದಲ್ಲಿ ಅದನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಿಕೊಳ್ಳದೆ ಇದ್ದಲ್ಲಿ ಅದರ ಕರ್ಮಫಲವು ಈ ಜನ್ಮದಲ್ಲಿ ಜಾತಕರಿಗೆ ಕೇತುವಿನಿಂದ ದೊರೆತಿರುತ್ತದೆ.

ಯಾವ ಜಾತಕರಿಗೆ ಜಾತಕದಲ್ಲಿನ ಚಂದ್ರರಿಗೆ ಕೇತುರವರ ನೇರ ಸಂಯೋಗ ಉಂಟಾದಾಗ ಅಂತಹ ಜಾತಕರಲ್ಲಿ ಇಂತಹ ದೈವಿಕ ಶಕ್ತಿ ಅಥವಾ ದೈವಿ ಆತ್ಮಗಳನ್ನು ಪ್ರೇರೇಪಿಸುವ ಶಕ್ತಿ ಮನಸ್ಸಿಗೆ ಬಂದಿರುತ್ತದೆ ಇಂತಹ ಜಾತಕರು ದೈವಿ ಶೆಕ್ತಿಗಳನ್ನು ಮಂತ್ರ ಮತ್ತು ಸ್ತೋತ್ರಗಳಿಂದ ಪೂಜಿಸಿ ತಮ್ಮ ಮನಸ್ಸಿನಲ್ಲಿ ನಿಶ್ಚಿತ ಕಾರ್ಯಗಳನ್ನು ದೈವಿಶಕ್ತಿಯು ಬಂದು ಪೂರೈಸುತ್ತಿದೆ ಎಂದು ತಿಳಿದು ಸಂಕಲ್ಪಿಸಿದ್ದಲ್ಲಿ ಅಂತಹ ಕಾರ್ಯಗಳನ್ನು ದೈವಿ ಶಕ್ತಿಯು ಪೂರೈಸುತ್ತದೆ

ಇಂತಹ ದೈವೀಶಕ್ತಿ ಆತ್ಮಗಳಿಗೆ ನಿರ್ಬಂಧಗಳು ಇರುತ್ತವೆ, ಇವು ತಮಗೆ ಇಚ್ಚೆ ಬಂದಹಾಗೆ ಕೆಲಸ ಮಾಡುವುದಿಲ್ಲ.

ವ್ಯಕ್ತಿಯ ಜಾತಕ ಇಲ್ಲದಿದ್ದರೂ ಇಂಥವರ ಜೀವನದಲ್ಲಿ ನಡೆಯುವ ಕೆಲವೊಂದು ಅನುಭವಗಳಿಂದ ಇಂಥವರನ್ನು ಸುಲಭವಾಗಿ ಗುರುತಿಸಬಹುದು

1. ಇವರ ಕನಸಿನಲ್ಲಿ ಹಾವುಗಳು, ಸತ್ತ ವ್ಯಕ್ತಿಗಳ ದೇಹಗಳು ಆಗಾಗ ಕಾಣಿಸಿಕೊಳ್ಳುವುದು.

2. ಅಮಾವಾಸೆ ಹುಣ್ಣಿಮೆಗಳಲ್ಲಿ ವಿಚಿತ್ರ ಅನುಬವಗಳು ಆಗುವುದು.

3. ಮನೆಯಲ್ಲಿ ಒಂಟಿಯಾಗಿದ್ದಾಗ ಯಾರೋ ಬಂದಂತೆ, ಸುಳಿದಾಡಿದಂತೆ ಅನಿಸುವುದು.

4. ತಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ನಡೆಯುವ ಮುಂಚೆ ಅವರ ಕನಸಿನಲ್ಲಿ ಯಾರೋ ವ್ಯಕ್ತಿಗಳು ಅಥವಾ ಸರ್ಪಗಳು ಬಂದು ಅದಕ್ಕೆ ತಕ್ಕ ಸೂಚನೆಗಳನ್ನು ಸೂಚನೆಗಳನ್ನು ನೀಡುವುದು

5.ಅವರ ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಅವರ ಶಕ್ತಿ ಮೀರಿ ಏನಾದರೂ ದೈಹಿಕವಾಗಿ, ಆರ್ಥಿಕವಾಗಿ ಬದಲಾವಣೆಗಳು ಆಗುವುದು

6.ಸದಾ ಸುಸ್ತು, ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳುವ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಕಾರ್ಯಗಳನ್ನು ಮಾಡಲು ನಿಲ್ಲುವುದು

7.ಇಂತಹ ವ್ಯಕ್ತಿಗಳ ಅತವ ಅವರ ಮಕ್ಕಳುಗಳ ಕಣ್ಣುಗಳು ಸಾಮಾನ್ಯರ ಕಣ್ಣುಗಳಿಗಿಂತ ಭಿನ್ನವಾಗಿದ್ದು ಕೆಲವೊಂದು ಬಾರಿ ಬೆಕ್ಕಿನ ಅಥವಾ ನಾಯಿಯ ಕಣ್ಣುಗಳನ್ನು ಹೋಲುತ್ತಿರುತ್ತದೆ

8.ಇಂತಹ ವ್ಯಕ್ತಿಗಳಿಗೆ ಸುತ್ತಲೂ ಇರುವಂತ ಯಾರಾದರೂ ಜನರು ಅವರಿಗೆ ತೊಂದರೆ ಕೊಟ್ಟಲ್ಲಿ ಕೆಲವೇ ದಿನಗಳ ಅಂತರದಲ್ಲಿ ತೊಂದರೆ ಕೊಟ್ಟಂತಹ ವ್ಯಕ್ತಿಗಳಿಗೆ ಏನಾದರೂ ದೈಹಿಕವಾಗಿ ಅಥವಾ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ

9. ಸಾಮಾನ್ಯ ಮನುಷ್ಯರು ಮಾಡಲಾಗದಂತಹ ಕೆಲಸ ಕಾರ್ಯಗಳನ್ನು ಇಂತಹ ಶಕ್ತಿಯನ್ನು ಹೊಂದಿರುತಕ್ಕಂತಹ ವ್ಯಕ್ತಿಗಳು ಮಾಡುತ್ತಿರುತ್ತಾರೆ ಉದಾಹರಣೆಗೆ ಹಿಂದಿನ ಕಾಲದಲ್ಲಿ ಬೃಹದಾಕಾರದ ದೇವಸ್ಥಾನಗಳ ನಿರ್ಮಾಣ ಕಾರ್ಯಗಳಲ್ಲಿ ಇಂತಹ ಶಕ್ತಿಗಳನ್ನು ಮನುಷ್ಯರಲ್ಲಿ ಆಹ್ವಾನಿಸಿ, ದೊಡ್ಡ ಗಾತ್ರದ ಕಲ್ಲುಗಳನ್ನು ದೇವಸ್ಥಾನ ಗೋಪುರ – ಆವರಣಗಳ ನಿರ್ಮಾಣಗಳಲ್ಲಿ ಬಳಸಿ ನಂತರ ಈ ಶಕ್ತಿಗಳನ್ನು ಅವರ ದೇಹದಿಂದ ಉಚ್ಛಾಟಿಸಲಾಗುತ್ತಿತ್ತು, ಆಹ್ವಾನಿಸಿದ ಶಕ್ತಿಗಳು ದೇವಸ್ಥಾನದ ಆವರಣದಲ್ಲಿ ಉಳಿದುಕೊಳ್ಳುವುದರಿಂದ ಅವುಗಳ ಪೂಜೆಗಾಗಿ ದೇವಸ್ಥಾನದ ಆವರಣದ ಸುತ್ತಲೂ ಬಲಿಪೀಠಗಳನ್ನು ನಿರ್ಮಿಸಿ ಅವುಗಳಿಗೆ ಪೂಜೆ ಮತ್ತು ಬಲಿಗಳನ್ನು ಇಂದಿಗೂ ಸಹ ನಿತ್ಯ ಪೂಜಾ ಕೈಂಕರ್ಯದಲ್ಲಿ ಮಾಡಲಾಗುತ್ತದೆ.

10. ವಿಚಿತ್ರವೆಂದರೆ ಈ ಜನ್ಮದಲ್ಲಿ ಇವರು ಸಾಮಾನ್ಯವಾಗಿ ಯಾವುದೇ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಾವು ಸಹ ಪೂಜೆಗಳನ್ನು ಮಾಡಲು ಇಂತಹ ವ್ಯಕ್ತಿಗಳು ಇಷ್ಟಪಡುವುದಿಲ್ಲ.

11.ಇಂತಹ ವ್ಯಕ್ತಿಗಳು ತ್ರಿಸಂದ್ಯಾ ಸಮಯದಲ್ಲಿ ಸ್ಮಶಾನ, ಬಯಲು ಪ್ರದೇಶಗಳು, ಗ್ರಾಮದಿಂದ ಹೊರಗಡೆ ಹೋದಾಗ ಇಂತಹ ಶಕ್ತಿಗಳಿಂದ ಪೀಡಿಸಲ್ಪಡುತ್ತಾರೆ ಇದರ ಪ್ರಭಾವ ಕೆಲವು ದಿನಗಳಿಂದ ಕೆಲವು ತಿಂಗಳಗಳವರೆಗೂ ಇರುತ್ತದೆ

12.ನಾಯಿಗಳು ಅಥವಾ ಪ್ರಾಣಿಗಳು ಇವರನ್ನು ನೋಡಿದಾಗ ವಿಚಿತ್ರವಾಗಿ ವರ್ತಿಸುತ್ತವೆ.

ಇದು ಕೇಲವಲ ಪ್ರಮುಖವಾದ ಸಂದರ್ಬಗಳಾಗಿದ್ದು, ಬೇರೆ ಬೇರೆ ವ್ಯಕ್ತಿಗಳಿಗೆ ಇನ್ನೂ ಬೇರೆಯತರಹದ ಅನುಭವಗಳಾಗಿರುತ್ತದೆ. ಇದನ್ನು ಜಾತಕದಲ್ಲಿ ನಿಖರವಾಗಿ ತಿಳಿಯಬಹುದ್ದಾದ್ದರಿಂದ ಇಂತಹ ಅನುಬವಗಳನ್ನು ಹೊಂದಿದ ಕೂಡಲೇ ಸೂಕ್ತ ದೈವಗ್ನರ/ಜ್ಯೋತಿಶಿಗಳ ಬಳಿಜಾತಕವನ್ನು ಪರೀಕ್ಷಿಸಿಕೊಳ್ಳುವುದು ಸೂಕ್ತವಾದ್ದು.

ಇದಕ್ಕೆ ಪರಿಹಾರವೇನು?

ಮೊದಲಿಗೆ ಜಾತಕರು ಸೂಕ್ತ ದೈವಗ್ನರ ಬಳಿ ತಮ್ಮ ಜಾತಕದಲ್ಲಿ ಇಂತಹ ಸಂಯೋಗಗಳು, ಯೋಗಗಳು ಇದ್ದಾವೆಯೇ ಎಂದು ಮೊದಲು ಪರೀಕ್ಷಿಸಿ ಕೊಳ್ಳಬೇಕು ನಂತರ ಇದಕ್ಕೆ ಸಂಬಂಧಪಟ್ಟ ಜ್ಞಾನವನ್ನು ಪಡೆದುಕೊಂಡು ಅಂತಹ ಶಕ್ತಿಗಳನ್ನು ಇವರು ಆರಾಧಿಸಿ ಅವುಗಳಿಂದ ರಕ್ಷಣೆಯನ್ನು ಮತ್ತು ಸಂಕಲ್ಪಿತ ಕಾರ್ಯಗಳನ್ನು ಮಾಡಿಸಿಕೊಳ್ಳುವ ಮಾರ್ಗವನ್ನು ತಿಳಿಯಬೇಕು.

ಅವುಗಳ ತಂಟೆಗೆ ಹೋಗದೆ ಮತ್ತು ಸಮಯ ಸಂದರ್ಭ ಸ್ಥಳಗಳನ್ನು ಅರಿತು ಓಡಾಡಬೇಕು, ಬೇರೆಯವರಿಗೆ ಕೆಟ್ಟದ್ದನ್ನು ಬಯಸಬಾರದು ಶಾಪ ಹಾಕಬಾರದು ಏಕೆಂದರೆ ಹಿಂದಿನ ಜನ್ಮದಲ್ಲಿ ಇದರ ದುರುಪಯೋಗಪಡಿಸಿಕೊಂಡು ಈ ಜನ್ಮದಲ್ಲಿ ಇದನ್ನು ಪಡೆದಿರುತ್ತಾರೆ.

ಚಂದ್ರ ಕೇತು ಸಂಯೋಗ ಇರುವವರು ಬೇರೆಯವರಿಗೆ ಕೆಟ್ಟದ್ದನ್ನು ಬಯಸದೆ ಶಾಪವನ್ನು ಹಾಕದೆ ಇರುವುದು ಇವರ ಶಾಪಗಳು ಬೇರೆಯವರಿಗೆ ಅತಿ ಬೇಗನೆ ತಟ್ಟುತ್ತದೆ.

ಚಂದ್ರ ರಾಹು ಸಂಯೋಗ ಇರುವವರು ತಮ್ಮ ಸಂಕಲ್ಪ ಕಾರ್ಯಗಳನ್ನು ನೆರವೇರಿಸಲು ಅಥವಾ ಸುಖ ಜೀವನವನ್ನು ನಡೆಸಲು ತಮ್ಮ ಜಮೀನಿನಲ್ಲಿ ನಾಗರಕಟ್ಟೆಗಳನ್ನು ನಾಗರ ಕಲ್ಲುಗಲನ್ನು ಸ್ಥಾಪಿಸುವುದು.

Tags: No tags

Comments are closed.