
ಯಾರು ಅಜ್ಞಾನಿಗಳೊ ಅವರು ಶಿಷ್ಯರಾಗಬಲ್ಲರು,ಯಾರಿಗೆ ತಾನು ಅಜ್ಞಾನಿ ಎಂಬ ಅರಿವಿದೆಯೋ ಆತ ಶಿಷ್ಯನ ಯ್ಯೋಗ್ಯತೆಯನ್ನು ಪಡೆದಿರುವನು,ಕಲಿಯಲು ತಯಾರಿರುತ್ತಾನೆ.
ಶಿಷ್ಯನ ಅರ್ಥವೇನು ?
ಯಾರು ಶಿರ ಬಾಗಿಸಲು ಒಪ್ಪುವರೋ ಅವರೇ ಶಿಷ್ಯರು, ಯಾರಲ್ಲಿದಿಯೋ ಅವರೇ ಶಿಷ್ಯರು.
ಶಿಷ್ಯ ಎಂದರರ್ಥ – ಒಂದು ಗಹನವಾದ ವಿನಮ್ರತೆ ಶಿಷ್ಯ ಎಂದರರ್ಥ – ತನ್ನನ್ನು ಬಗ್ಗಿಸಿ,ಹೃದಯವನ್ನು ಒಂದು ಪಾತ್ರೆಯಾಗಿಸುವುದು.
ಗುರು ಎಂಬ ನದಿ ಹರಿಯುತ್ತಿರುತ್ತದೆ,ನೀವು ಬಾಯಾರಿ ನಿಂತಿರುವಿರಿ,ಬಗ್ಗಿ ನೀರನ್ನು ತೆಗೆದುಕೊಳ್ಳದಿದ್ದರೆ ನದಿಯೇ ಎಗರಿ ನಿಮ್ಮ ಬೊಗಸೆಯನ್ನು ತುಂಬುವುದಿಲ್ಲಾ. ನದಿಗೆ ನಿಮ್ಮ ಬಗ್ಗೆ ಕೋಪವೇನು ಇಲ್ಲಾ.ನಿಮ್ಮ ಬಾಯಾರಿಕೆಯನ್ನು ಹೋಗಲಾಡಿಸಲು ನದಿ ಸದಾ ತತ್ಪರವಾಗಿಯೇ ಇದೆ.ಆದರ ನೀವು ಬಗ್ಗಿ ಕೈಗಳನ್ನು ಬೊಗಸೆಯಾಗಿಸಿದರೇ ಮಾತ್ರವೇ ನದಿಯ ನೀರು ನಿಮ್ಮ ಬೊಗಸೆಗೆ ಬರುವುದು, ಜ್ಞಾನವೂ ಅಷ್ಟೆ , ನೀವು ಶಿರ ಬಾಗಿಸದಿದ್ದರೆ ಉಪಲಬ್ದಿಯಾಗದು.
- ಗುರುವನ್ನು ಶೋಧಿಸಬೇಕಾದಲ್ಲಿ ಶಾಸ್ತ್ರಗಳನ್ನು ಒಂದು ಬದಿಗಿಟ್ಟು ಬನ್ನಿ. ಗುರುವನ್ನರಸುವುದಾದರೆ ಓರ್ವನ ಸನ್ನಿಧಿಯನ್ನು ಪಡೆಯಲೆತ್ನಿಸಿ. ಅವನ ಸತ್ಸಂಗವನ್ನು ಮಾಡಿ.
- ನಿಮ್ಮದಾದ ಯಾವ ಸಿದ್ದಾಂತವನ್ನು ತಯಾರು ಮಾಡಿಕೊಂಡು ಆತನ ಬಳಿ ಹೋಗಬೇಡಿ ನಿಮ್ಮದಾದ ಅಡಿಪಟ್ಟಿಗಳನ್ನು ಒಯ್ಯಬೇಡಿ.
ನೇರವಾಗಿ ಹೃದಯವು ಹೃದಯವನ್ನು ಸೇರುವಂತಿರಲಿ.ಬುದ್ಧಿಯನ್ನು ಆ ದಾರಿಯಲ್ಲಿ ಅಡ್ಡತರಬೇಡಿ. ಬುದ್ದಿಯು ಅಡ್ಡಬಂತೆಂದರೆ ಹೃದಯಗಳ ಮಿಲನವಾಗದು-ನೀವೆಂದೂ ಗುರುವನ್ನು ಗುರುತ್ತಿಸಲಾರಿರಿ. ಗುರುವಿನ ಗುರುತು ಹತ್ತುವುದು ಹೃದಯದ ಮೂಲಕ-ಬುದ್ಧಿಯಿಂದಲ್ಲ.ಬುದ್ಧಿಯನ್ನು ದೂರ ತಳ್ಳಿ ಹೃದಯದಿಂದ ನೋಡುವಿರಾದರೆ ಕೂಡಲೇ ಒಂದಾನೊಂದು ವಸ್ತು ಘಟಿಸುವುದು .
ಒಂದು ವೇಳೆ ನಿಮ್ಮ ತಾಳ ಮೇಳವು ಈ ಗುರುವಿನೊಂದಿಗೆ ಸಂಭವಿಸಿದರೆ .ಒಂದು ಕ್ಷಣ ಕಾಲವೂ ಹೊತ್ತು ಹಿಡಿಯದು. ನೀವು ಆ ಗುರುವಸ್ತುವಿನಲ್ಲಿ ಕರಗಿ ನೀರಾಗಿ ಸೇರಿಹೋಗುವಿರಿ. ಆ ವಸ್ತು ಕರಗಿ ನಿಮ್ಮಲ್ಲಿ ಒಂದಾಗುವುದು. ಆ ಹೊತ್ತಿನಿಂದ ನೀವು ಅದರ ಅಭಿನ್ನ ಅಂಗವಾಗುವಿರಿ. ಅಂದಿನಿಂದ ನೀವು ಅದರ ಛಾಯೆಯಾಗುವಿರಿ. ಅದರ ಹಿಂದೆ ಹಿಂದೆಯೇ,ಜೊತೆ ಜೊತೆಗೇ ನಿಮ್ಮ ಅಸ್ತಿತ್ವ. ಹೃದಯದಿಂದ ಶೋಧಿಸಲ್ಪಡುವವನು ಗುರು. ಗುರುವಿನ ಹೊರತು ಬೇರಾವ ಉಪಾಯವೂ ಇಲ್ಲ.
ಗುರು ಉಪಾಯ. ಗುರುವೆಂದರೆ ಕೇವಲ ಇಷ್ಟೇ ಅರ್ಥ- ತಿಳಿದವನು, ಅನುಭವಿಸಿದವನು ಕಾರಾಗೃಹದಿಂದ ಹೊರಬಂದವನು. ಅವನು ಮಾತ್ರ ನಿಮಗೆ ವರ್ತಮಾನವನ್ನು ಮುಟ್ಟಿಸಬಲ್ಲ.
ನೀವು ಕೂಡ ಈ ಬಂದೀಖಾನೆಯಿಂದ ಹೇಗೆ ಪಾರಾಗಬಲ್ಲಿರೆಂಬ ಉಪಾಯವನ್ನು ತಿಳಿಸಿಕೊಡಬಲ್ಲ. ಹಾಗೂ ಆತನೇ-“ಈ ಬಂದೀ ಖಾನೆಗೂ ಹೊರಗೆ ಹೋಗಲು ಬಾಗಿಲು ಇದೆ.ಈ ಬಾಗಿಲಿನ ಮೂಲಕ ನೀವು ಬಿಡುಗಡೆ ಹೊಂದಿ ಹೊರಕ್ಕೆ ಹೋಗಬಹುದು.”-ಎಂದು ಆತನು ತಿಳಿಸಿಕೊಡುವನು.
ಈ ಕಾರಾಗೃಹದ ಕೆಲವು ಬಾಗಿಲುಗಳಲ್ಲಿ ರಕ್ಷಕರು ತೂಕಡಿಸುವರು. ಮತ್ತೆ ಕೆಲವು ಬಾಗಿಲುಗಳಲ್ಲಿ ಕಾಯುವವರು ತುಂಬ ಎಚ್ಚರದಿಂದಿರುವರು.
ಒಂದು ವೇಳೆ ನೀವು ತಪ್ಪಿ ಈ ಬಾಗಿಲುಗಳ ಮೂಲಕ ಹೊರ ಓಡುವ ಯತ್ನ ಮಾಡಿದರೆ ಮತ್ತುಷ್ಟು ಕಷ್ಟಕ್ಕೆ ಒಳಗಾಗುವಿರಿ. ಈಗ ನೀವು ಕಾರಾಗೃಹಲ್ಲೇ ಇದ್ದರೂ ಒಳಗಾದರೂ ಸ್ವಲ್ಪ ಸ್ವತಂತ್ರರಾಗಿರುವಿ. ಈ ಮುಖ್ಯ ದ್ವಾರದಿಂದ –ದ್ವಾರಪಾಲಕರು ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುವ ಈ ದ್ವಾರದಿಂದ ತಪ್ಪಿಸಿಕೊಂಡೋಡಲು ನೀವು ಯತ್ನಿಸಿದರೆ ಕಾರ್ಗತ್ತಲು ತುಂಬಿ ಕೊಠಡಿಗೆ ತಳ್ಳಲ್ಪಡುವಿರಿ. ಕಾರಾಗೃಹದ ಕೋಣೆಯು ಮತ್ತು ಕಿರಿದಾಗುವುದು. ಆದ್ದರಿಂದ ಎಚ್ಚರದಲ್ಲಿರಿ -ನಿಷೇಧಗಳ ಮೂಲಕ ಹಾದು ಹೋಗಲೆತ್ನಿಸಬೇಡಿ. ಹೀಗೆ ಮಾಡಿದರೆ ನಿಮಗೆ ಅಂಧಕಾರ ಕೂಪವೇ ಗತಿ.
ಪ್ರಮುಖ ದ್ವಾರದಿಂದ ಓಡಬಯಸುವವನು ಸಿಕ್ಕಿ ಬೀಳುವವನೇ ಸರಿ.ಗುಪ್ತ ದ್ವಾರಗಳು-ಇದನ್ನು ಗುರು ಮಾತ್ರವ ತೋರಿಸಿಕೂಡಬಲ್ಲಾ.ಅದರ ಕೀಲಿಕೈಗಳು ಆತನ ಬಳಿ ಇರುವುವು.ಅವುಗಳಿಂದ ಗುಪ್ತದ್ವಾರದ ಬಾಗಿಲುಗಳು ತೆರೆದುಕೊಳ್ಳುವುವು.ಯಾವತನು ಹೊರಕ್ಕೆ ಹೋಗಿರುವನೋ ಅವನು ಮಾತ್ರ ನಿಮ್ಮನ್ನು ಹೊರಕ್ಕೆ ಕರೆದುಕೂಂಡು ಹೋಗಬಲ್ಲಾ

ಆದ್ದರಿಂದ ಜನರು ಮೊದಲು ಪುಸ್ತಕವನ್ನೋದುವರು.ಪುಸ್ತಕಗಳಿಂದ ಬೇಸತ್ತು ಗುರುವನ್ನರಸುವರು.ಇದರ ಪರಿಣಾಮವಾಗಿ ಸಾಮಾನ್ಯಾವಾಗಿ ಹೇಗಾಗುವುದೆಂದರೆ-ಪುಸ್ತಕಗಳಿಂದ ಬುದ್ದಿಯನ್ನು ಕೆಡಿಸಿಕೊಂಡು ತಮ್ಮ ದೃಷ್ಠಿಯನ್ನು ವಿಕೃತಗೊಳಿಸಿಕೊಂಡು ಕಡೆಗೆ ನಿಜವಾದ ಗುರು ಸಿಕ್ಕರೂ ಅವನ್ನೂ ಗುರುತಿಸಲಾರದಂತ ದುಸ್ಥಿಗೆ ಬರುವರು


Add a Comment