ನಾಡಿ ಜ್ಯೋತಿಷ್ಯದ ಮಹತ್ವಗಳು – ಶ್ರೀ ಮಧು ಚಿನ್ನಪ್ಪ

ನಾಡಿ ಜ್ಯೋತಿಷ್ಯ ಶಾಸ್ತ್ರದಲ್ಲಿ

೧. ಪ್ರಶ್ನ ಶಾಸ್ತ್ರ

೨. ಜಾತಕ ವಿಶ್ಲೇಷಣೆ

೩. ಗೋಚಾರ

೪. ಮಹೂರ್ತ

ಈ ಮೇಲ್ಕಂಡ ವಿಭಾಗಗಳು ಒಂದಕ್ಕೊಂದು ಸಂಬಂದಗಳಿದ್ದು

ಪ್ರಶ್ನ ಶಾಸ್ತ್ರ

ಬಂದಂತಹ ಪುಚ್ಚಕನಿಗೆ ಎರಡು ಭಾಗಗಳಾಗಿ ಉತ್ತರವನ್ನು ನೀಡುತ್ತದೆ ಒಂದು ಹೌದು ಅಥವಾ ಇಲ್ಲ. ಪುಚಕನು ಇಲ್ಲಿ ತನ್ನ ಕಾರ್ಯಗಳ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಬಂದಿರುತ್ತಾನೆ. ಇಲ್ಲಿ ಹೌದು ಅಥವಾ ಇಲ್ಲ ಎಂಬುವ ಎರಡು ಉತ್ತರಗಳು ದೊರೆಯುತ್ತದೆ ತದನಂತರ ಇವುಗಳಿಗೆ ಅನ್ವಯವಾಗುವ ಹೇಗೆ ಯಾವಾಗ ಎಲ್ಲಿ ಎನ್ನುವ ಮುಂತಾದ ಪ್ರಶ್ನೆಗಳಿಗೆ ಮುಂದಿನ ಹಂತದಲ್ಲಿ ಉತ್ತರವನ್ನು ಹುಡುಕಬಹುದು. ಇಲ್ಲಿ ವ್ಯಕ್ತಿಯ ಜಾತಕದ ಅವಶ್ಯಕತೆ ಇರುವುದಿಲ್ಲ ಬಂದಂತಹ ಸಮಯದ ಆಧಾರದ ಮೇಲೆ ಗೋಚಾರದಲ್ಲಿನ ಗ್ರಹಗಳ ಚಲನೆ ಮತ್ತು ಹೋರಾಧಿಪತಿಯ ಸ್ಥಾನ ಸಂಯೋಗಗಳು ಇವುಗಳನ್ನು ಅನುಸರಿಸಿ ಪುಚ್ಚಕರ ಪ್ರಶ್ನೆಗಳಿವೆ ಉತ್ತರವನ್ನು ಹುಡುಕುತ್ತೇವೆ

ಜಾತಕ ವಿಶ್ಲೇಷಣೆ

ಎಲ್ಲಿ ಜಾತಕ ವಿಷ್ಲೇಶಣೆ ನಮಗೆ 2-ಆಯಾಮದ ಜ್ನಾನವನ್ನು ನೀಡುತ್ತದೆ ಹಿಂದೆ ಮತ್ತು ಮುಂದೆ. ಜಾತಕನು ಈ ಹಿಂದೆ ಏನು ಮಾಡಿದ್ದ ಇನ್ನು ಮುಂದೆ ಏನು ಮಾಡುತ್ತಾನೆ ಅವನ ಕರ್ಮಗಳು ಹೇಗೆ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಇಲ್ಲಿ ಪ್ರಮುಖವಾಗಿ 12 ರಾಶಿಗಳು 9 ಗ್ರಹಗಳು 27 ನಕ್ಷತ್ರಗಳ ಸಂಯೋಗಗಳಿಂದ ಗ್ರಹ ಸ್ಥಿತ ರಾಶಿ ನಕ್ಷತ್ರಗಳು ಇವುಗಳನ್ನು ಅನುಸರಿಸಿ ಜಾತಕ ವಿಶ್ಲೇಷಣೆಯನ್ನು ಮಾಡುತ್ತೇವೆ ಇಲ್ಲಿ ನಾವು ಅವರಿಗಿರುವ ಸಂಯೋಜನೆಗಳ ಅನುಸಾರ ಹಿಂದಿನ ಕರ್ಮ ಮುಂದಿನ ನಡೆಯನ್ನು ಅರಿಯಬಹುದಾಗಿದೆ ಇದು 2-Dimensional ಆಗಿದ್ದು ನಾವು  ಹಿಂದೆ ಮತ್ತೆ ಮುಂದೆ ಹೋಗಬಹುದಾಗಿದೆ

ಗೋಚಾರ

ಗೋಚಾರವು ನಮಗೆ ಜಾತಕ ವಿಶ್ಲೇಷಣೆಯ ಎರಡನೇ ಆಯಾಮದ ಏನು ತಡೆಯಿದಿಯೋ ಅದನ್ನು ಮೀರಿ ನಾವು ಮೂರನೇ ಆಯಾಮವನ್ನು ( 3-Dimension) ತೆರೆಯುತ್ತೇವೆ. ಇಲ್ಲಿ ಜಾತಕದಲ್ಲಿನ ಕ್ರಿಯೆಗಳು ಕರ್ಮದ ಫಲಗಳು ಯಾವಾಗ ನಡೆಯುತ್ತದೆ ಎಂಬುದನ್ನು ತಿಳಿಯಬಹುದಾಗಿದೆ ಇದರಿಂದ ಪುಚ್ಚಕನು ಜಾತಕ ವಿಶ್ಲೇಷಣೆಯನ್ನು ಅತ್ಯಂತ ನಿಖರವಾಗಿ ಮಾಡಬಹುದಾಗಿದೆ, ಗೋಚಾರವು ಜಾತಕದ ಸಂಯೋಗಗಳು ಯಾವಾಗ ಹೇಗೆ ಎಷ್ಟು ಪರಿಣಾಮದಲ್ಲಿ ಪಲ ನೀಡುತ್ತದೆ ಎಂದು ತಿಳಿಯಬಹುದಾಗಿದೆ.

ಮುಹೂರ್ತ

ಇದು ಪುರಾತನ ಜ್ನಾನಿಗಳು ಋಷಿ ಮುನಿಗಳು ಮಾನವ ಜನಾಂಗಕ್ಕೆ ಕೊಟ್ಟಂತರ ಅದ್ಬುತ ವರವಾಗಿದೆ.

ಮನುಷ್ಯನ ಮನಸ್ಸು ತನ್ನ ಕರ್ಮದ ಆದಾರದ ಮೇಲೆ ರೂಪುಗೊಂಡು, ಅದರಂತೆ ಮನುಷ್ಯನ್ನನು ಆದಿಸುತ್ತಿರುತ್ತದೆ. ಇಂತಹ ಮನಸ್ಸಿಗೆ ಬಂದಿಯಾದ ಮನುಷ್ಯನು ತನ್ನ ಕರ್ಮಪಲವನ್ನು ಅನುಬವಿಸುವ ಒಂದು ದಾರಿಯನ್ನು ಬಿಟ್ಟು ಬೇರೆ ಏನು ಮಾಡಲಾರ.

ತನ್ನ ಮನಸ್ಸನ್ನು/ ಕರ್ಮವನ್ನು ಮೀರಿ ಮನುಷ್ಯನು ಬೆಳೆಯ ಬೇಕಾದರೆ ಹುಟ್ಟಿನಿಂದ ಸಾವಿನವರೆಗೂ ಪ್ರತಿ ಹಂತದಲ್ಲಿಯೂ ಮೂಹೂರ್ತದ ಮೊರೆ ಹೋಗಬೇಕಾಗುತ್ತದೆ. ಇವುಗಳಲ್ಲಿ  ಪ್ರಮುಖವಾದವು ನಿಷೇಖ,ಗರ್ಭಾದಾನ, ಗೃಹಪ್ರವೇಶ, ಮದುವೆ, ವಿಧ್ಯಾಬ್ಯಾಸ, ಅನ್ನಪ್ರಾಸನ, ಉಪನಯನ, ಕೊಳ್ಳುವುದು ಮತ್ತು ಮಾರುವುದು ಮುಂತಾದವುಗಳಲ್ಲಿ ಮೂಹೂರ್ತವನ್ನು ಅನುಸರಿಸಿ ತನ್ನ ಕರ್ಮಪಲವನ್ನು ಮೀರಿ ಪಲವನ್ನು ಪಡೆಯಬಹುದಾಗಿದೆ.

ಜಾತಕದಲ್ಲಿನ ವ್ಯಕ್ತಿಯ ಕರ್ಮಫಲಗಳ ಒಳ್ಳೆಯ ಸಂಯೋಗಗಳಾಗಲಿ ಕೊಡಿಸಲು ಅಥವ ಕೆಟ್ಟ ಫಲಗಳನ್ನು ನಿವಾರಿಸಲು ಇರುವಂತಹ ಒಂದು ಪರಿಹಾರ ವಿಭಾಗವಾಗಿದೆ ಇಲ್ಲಿ ಗೋಚಾರವನ್ನು ಸಹ ನಾವು ತೆಗೆದುಕೊಳ್ಳುತ್ತೇವೆ ಮುಹೂರ್ತ ಮತ್ತು ಗೋಚಾರದ ಸಂಯೋಗಗಳಿಂದ ಜಾತಕದಲ್ಲಿರುವಂತಹ ಕೆಟ್ಟ ಸಂಯೋಗಳನ್ನು ಕಡಿಮೆ ಮಾಡಲು ಅಥವಾ ಪೂರ್ಣವಾಗಿ ನಿಲ್ಲಿಸಲು ಮತ್ತು ಜಾತಕದಲ್ಲಿನ ಒಳ್ಳೆಯ ಸಂಯೋಗ ಫಲಗಳನ್ನು ಸರಿಯಾದ ಸಮಯಕ್ಕೆ ಜಾತಕನಿಗೆ ಪೂರ್ಣವಾಗಿ ಕೊಡಿಸಲು ಅಥವಾ ಜಾತಕದಲ್ಲಿ ಇಲ್ಲದೆ ಇರುವಂತಹ ಈಗ ಆ ವ್ಯಕ್ತಿಗೆ ಬೇಕಾಗಿರುವಂತಹ ಸಂಯೋಗಗಳನ್ನು ಉಂಟು ಮಾಡಿ ಪರಿಹಾರಾರ್ಥವಾಗಿ ಜಾತಕನಿಗೆ ಕೊಡಿಸಲು ಮುಹೂರ್ತದ ಭಾಗ ನಮಗೆ ಸಹಾಯಮಾಡುತ್ತದೆ.

ಇರುವುದನ್ನು ಕೊಡಿಸುವಂತಹ ಶಕ್ತಿ, ಮುಹೂರ್ತದ ಸಿದ್ದಿ ಹೊಂದಲು ದೈವಗ್ನನು ತುಂಬಾ ಪ್ರಜ್ಞನಾಗಿರಬೇಕಾಗುತ್ತದೆ ಹಾಗೂ ಆತನ ಆಹಾರ ಜೀವನ ಶೈಲಿ ತುಂಬಾ ಶಿಸ್ತುಬದ್ಧವಾಗಿ ಇರಬೇಕಾಗುತ್ತದೆ ಹಾಗೂ ಇದನ್ನು ಅರಸಿ ಬರುವಂತಹ ಪುಚ್ಚಕನು ಸಹ ಸದಾ ಪ್ರಜ್ಞಾಸಹಿತನಾಗಿರಬೇಕಾಗುತ್ತದೆ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಮುಹೂರ್ತ ಮತ್ತು ಗೋಚಾರಗಳಿಗೆ ಅಂಟಿಕೊಂಡು ಇರಬೇಕಾಗುತ್ತದೆ ಈಗಿನ ಕಾಲದಲ್ಲಿ ಅಂತಹ ಇಂತವರು ಸಿಗುವುದು ದುರ್ಲಭ

Tags: No tags

Comments are closed.