ಶಿವಂಗುರೂಜಿ

ಮನುಷ್ಯನ ಜೀವನದಲ್ಲಿ ಸುಖದ ದಿನಗಳು ಮತ್ತು ಕಷ್ಟದ ಜೀವನಗಳು – ಶ್ರೀ ಮಧು ಚಿನ್ನಪ್ಪ

ಮನುಷ್ಯ ಭೂಮಿಗೆ ಬರುವಾಗ ಕರ್ಮಫಲಕ್ಕೆ ತಕ್ಕ ಹಾಗೆ ಆತ ತನ್ನ ಇಂದ್ರಿಯಗಳನ್ನು ಹೊತ್ತು ತಂದಿರುತ್ತಾನೆ. ಇವುಗಳು ದೈಹಿಕವಾಗಿ ಆತನ ದೇಹದಲ್ಲಿ ಅವನ ಕರ್ಮನುಸಾರವಾಗಿ ರೂಪುಗೊಂಡಿರುತ್ತದೆ ಆತನ ಒಳ್ಳೆಯ ಕರ್ಮಗಳಿಗೆ ಅನುಸಾರವಾಗಿ ಇಂದ್ರಿಯಗಳು ಆರೋಗ್ಯಕರವಾಗಿಯೂ ಮತ್ತು ಆತನ ಕೆಟ್ಟ ಕರ್ಮಫಲಗಳಿಗೆ ಅನುಸಾರವಾಗಿ ಇಂದ್ರಿಯಗಳು ಲೋಪ ದೋಷಗೊಂಡು ಉಂಟಾಗಿರುತ್ತದೆ

ಇಲ್ಲಿ ಮನುಷ್ಯನಿಗೆ ತಾನು ಇರುವ ವಾತಾವರಣದಲ್ಲಿ ಆಂತರಿಕವಾಗಿ ತನ್ನ ವಾತಾವರಣದಲ್ಲಿನ ಸುಖ-ದುಃಖಗಳನ್ನು ಅರಿಯುವ ಮಾಧ್ಯಮವೆಂದರೆ ತನ್ನ ಇಂದ್ರಿಯಗಳು ಈ ಇಂದ್ರಿಯಗಳು ಆತನ ಆಂತರಿಕ ಸಂತೋಷಕ್ಕೂ ಮತ್ತು ಬಾಹ್ಯ ಚಟುವಟಿಕೆಗಳಿಗೂ ಸೇತುವೆಯಾಗಿರುತ್ತದೆ ತನ್ನ ಎಲ್ಲಾ ಇಂದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡಿ ತನ್ನ ವಾತಾವರಣದಲ್ಲಿನ, ಮನಸ್ಸು ಬಯಸುವ ಎಲ್ಲಾ ಪೂರಕ ವಿಷಯಗಳನ್ನು ಇಂದ್ರಿಯಗಳ ಮುಖಾಂತರ ತೆಗೆದುಕೊಂಡಾಗ ಅದು ಆತನಿಗೆ ಸುಖದ ಸಮಯವಾಗಿರುತ್ತದೆ ಆತನ ಮನಸ್ಸಿಗೆ ಇಷ್ಟವಿಲ್ಲದ ಅಥವಾ ಇಂದ್ರಿಯಗಳಿಂದ ಸರಿಯಾದ ಮಾಹಿತಿಯನ್ನು ತೆಗೆದುಕೊಳ್ಳಲು ಆಗದಿದ್ದ ಸಮಯದಲ್ಲಿ ಅದು ಆತನಿಗೆ ದುಃಖದ ಸಮಯವಾಗಿರುತ್ತದೆ

ಇಲ್ಲಿ ಎರಡು ವಿಚಾರಗಳು ವ್ಯಕ್ತಿಯ ಸುಖ ದುಃಖಗಳನ್ನು ನಿರ್ಧರಿಸುತ್ತಿರುತ್ತದೆ
ಒಂದು ಆ ವ್ಯಕ್ತಿಯ ಸುತ್ತಮುತ್ತಲಿನ ವಾತಾವರಣ , ಎರಡನೆಯದು ಆ ವಾತಾವರಣಕ್ಕೆ ಆ ವ್ಯಕ್ತಿಯ ಇಂದ್ರಿಯಗಳು ಹೇಗೆ ಪ್ರತಿಕ್ರಿಸುತ್ತಿವೆ ಎಂಬುದಾಗಿದೆ

ವಾತಾವರಣದಿಂದ ಬಂದಂತ ಪ್ರತಿಕ್ರಿಯೆಯು ಇಂದ್ರಿಯಗಳಿಗೆ ತಲುಪಿ ಅದು ಆತನ ನರ ವ್ಯವಸ್ಥೆಗಳ ಮುಖಾಂತರ ಆತನ ಮೆದುಳಿಗೆ ತಲುಪಿ ಅಲ್ಲಿ ಕೆಲವೊಂದು ಗ್ರಂಥಿಗಳಿಂದ ಸಂತೋಷಕ್ಕೆ ಅಥವಾ ದುಃಖಕ್ಕೆ ಕಾರಣವಾದ ಹಾರ್ಮೋನ್ ಗಳನ್ನು ಸ್ರವಿಸುತ್ತದೆ ಇದರಿಂದ ಆತನ ಮನಸ್ಸಿನಲ್ಲಿ ಆಲೋಚನೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ

ಆದ್ದರಿಂದ ವ್ಯಕ್ತಿಯ ನರ ವ್ಯವಸ್ಥೆಯು ನರಮಂಡಲದ ವ್ಯವಸ್ಥೆಯು ಮತ್ತು ಇಂದ್ರಿಯಗಳು ಇಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ ನರ ವ್ಯವಸ್ಥೆಗೆ ಕಾರಕವಾದ ಗ್ರಹ ಜ್ಯೋತಿಷ್ಯ ಶಾಸ್ತ್ರದಲ್ಲಿ ನರ ವ್ಯವಸ್ಥೆಗಳಿಗೆ ಕಾರಕವಾದ ಗ್ರಹ ಬುಧ ಗ್ರಹವಾಗಿತ್ತು ವ್ಯಕ್ತಿಯ ಜಾತಕದಲ್ಲಿ ಬುಧಗ್ರಹರಿಗೆ ಗೋಚಾರದಲ್ಲಿ ಶುಭ ಗ್ರಹವಾದ ಗುರುಗ್ರಹವು ಸಂಯೋಗಗೊಂಡಾಗ ಆತನ ನರ ವ್ಯವಸ್ಥೆಯು ಅತ್ಯಂತ ಕ್ಷಮತೆಯಿಂದ ಯಾವುದೇ ಅಡ್ಡಿ ಇಲ್ಲದೆ ನರ ವ್ಯವಸ್ಥೆಯು ಕಾರ್ಯಾಚರಣೆಗೊಂಡು ಆತನ ಇಂದ್ರಿಯಗಳಿಂದ ಬರುವಂತಹ ಸಮಾಚಾರವನ್ನು ಸಂಸ್ಕರಿಸಿ ನೇರವಾಗಿ ಮೆದುಳಿಗೆ ಕೊಡುವುದರಿಂದ ಮತ್ತು ನರ ವ್ಯವಸ್ಥೆಯ ಪೂರ್ಣ ಕ್ಷಮತೆಯು ಎಲ್ಲಾ ಇಂದ್ರಿಯಗಳನ್ನು ಒಂದುಗೂಡಿಸುವುದರಿಂದ ಆತನಿಗೆ ಅದು ಕಷ್ಟದಲ್ಲಿಯೂ ಸಹ ಸುಖವನ್ನು ತಂದು ಕೊಡುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ ಒಂದು ವೇಳೆ ಜಾತಕದ ಬುಧರ ಮೇಲೆ ಗೋಚಾರದಲ್ಲಿ ಅಶುಭ ಗ್ರಹಗಳ ಸಂಯೋಗ ಆದಾಗ ಆತನ ನರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿ ಇಂದ್ರಿಯಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯು ಅಸಮರ್ಪಕವಾಗಿ ಮೆದುಳನ್ನು ಸೇರುತ್ತದೆ ಇದರಿಂದ ಆತನಿಗೆ ಸುಖವನ್ನುಂಟು ಮಾಡುವ ಗ್ರಂಥಿಗಳು ಸ್ರವಿಸದೆ ಇರುವುದರಿಂದ ಆತನಿಗೆ ಸುತ್ತಮುತ್ತಲಿನಲ್ಲಿ ಸಂತೋಷದ ಸಂದರ್ಭ ಇದ್ದಾಗಲೂ ಅದನ್ನು ಆತ ಪೂರ್ಣವಾಗಿ ಅನುಭವಿಸಲು ಅಸಮರ್ತನಾಗುತ್ತಾನೆ..

ಇದರಿಂದ ನಾವು ತಿಳಿದುಕೊಳ್ಳುವುದೇನೆಂದರೆ ವ್ಯಕ್ತಿಯ ಸಂತೋಷವಿರಲಿ ದುಃಖದ ವಾತಾವರಣವಿರಲಿ ಅದು ಆತನು ಹೇಗೆ ಸ್ವೀಕರಿಸುತ್ತಾನೆ ಎಂಬುದರ ಮೇಲೆ ನಿಂತಿರುತ್ತದೆ ಇದನ್ನು ಅರಿತ ನಮ್ಮ ಪುರಾತನ ಜ್ಞಾನಿಗಳು ಋಷಿಮುನಿಗಳು ಇಂದ್ರಿಯಗಳಿಗೆ ಸಂಬಂಧಪಟ್ಟ ಜ್ಞಾನವನ್ನು ಮತ್ತು ಮನಸ್ಸನ್ನು ಅರಿತುಕೊಳ್ಳುವ ಜ್ಞಾನವನ್ನು ಕೊಟ್ಟಿರುತ್ತಾರೆ ಅದರಲ್ಲಿ ಪ್ರಮುಖವಾದದ್ದು

  1. ಇಂದ್ರಿಯ ಪ್ರತ್ಯಹಾರ ಇದರಲ್ಲಿ ನಮ್ಮ ಇಂದ್ರಿಯಗಳಿಂದ ಬರುವಂತಹ ಎಲ್ಲಾ ಮಾಹಿತಿಗಳನ್ನು ನಾವು ಸಂಪೂರ್ಣವಾಗಿ ಮನಸ್ಸಿಗೆ ಅಥವಾ ಮೆದುಳಿಗೆ ತೆಗೆದುಕೊಂಡು ಹೋಗದೆ ಅದನ್ನು ಅಲ್ಲೇ ಬಿಟ್ಟು ನಮ್ಮ ಬುದ್ಧಿಯ ಅನುಸಾರ ನಾವು ಕೆಲಸ ಮಾಡುವುದು ಇಲ್ಲಿ ಇಂದ್ರಿಯಗಳಿಗೆ ಹೆಚ್ಚು ಮಹತ್ವವನ್ನು ಕೊಡದೆ ಇಂದ್ರಿಯ ಸುಖಕ್ಕೆ ಹೆಚ್ಚು ಮಹತ್ವವನ್ನು ಕೊಡದೆ ಇಂದ್ರಿಯಗಳನ್ನು ಕೇವಲ ಸಾಧನವಾಗಿ ಬಳಸಿಕೊಳ್ಳುವುದಾಗಿರುತ್ತದೆ
  2. ಶೂನ್ಯ ಸಾಧನೆ ಮನಸ್ಸನ್ನು ಶೂನ್ಯದ ಕಡೆಗೆ ಸಂಪೂರ್ಣ ನಿಶ್ಯಬ್ದದದೆಡೆಗೆ ತೆಗೆದುಕೊಂಡು ಹೋಗುವುದು ಮನಸ್ಸು ತನ್ನ ವ್ಯಕ್ತಿಯ ಎಲ್ಲಾ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದರಿಂದ ಹೆಚ್ಚು ಮನಸ್ಸನ್ನು ಉಪಯೋಗಿಸಿಕೊಳ್ಳುವ ವ್ಯಕ್ತಿಯು ಬೇಗ ಸುಸ್ತಾಗುವುದು ಹೆಚ್ಚು ಆಲಸಿಯಾಗುವುದು ಅತಿ ಹೆಚ್ಚು ಆಹಾರವನ್ನು ಸೇವಿಸಲು ಬಯಸುತ್ತಾನೆ . ಏಕೆಂದರೆ ಮನಸ್ಸು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತದೆ ಇದರಿಂದ ಇಂದ್ರಿಯಗಳಿಗೂ ಮತ್ತು ಮೆದುಳಿಗೆ ಆಗುವ ಸಂಪರ್ಕವನ್ನು ಮನಸ್ಸು ಹೆಚ್ಚು ತಡೆಯುತ್ತದೆ ಶೂನ್ಯ ಸಾಧನೆಯಿಂದ ಅಥವಾ ಮನಸ್ಸನ್ನು ಕೇವಲ ಒಂದು ಕೆಲಸದೆಡೆಗೆ ಪ್ರಚೋದಿಸುವುದರಿಂದ ಆ ವ್ಯಕ್ತಿಯಲ್ಲಿ ಉತ್ಪತ್ತಿಯಾಗುವ ದೈಹಿಕ ಶಕ್ತಿಯು ಶೇಖರಣೆಗೊಂಡು ಆತ ಇನ್ನೂ ಹೆಚ್ಚು ಕೆಲಸ ಮಾಡಲು ಉತ್ಸುಕನಾಗುತ್ತಾನೆ.
  3. ಜಾತಕರ ಜಾತಕದ ಬುಧರ ಮೇಲೆ ಗೋಚಾರದ ಗುರು ರವರು ಇದ್ದಾಗ ಆ ವ್ಯಕ್ತಿಯು ಸುಖಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದರಿಂದ

ಹೀಗೆ ವ್ಯಕ್ತಿಯ ಸುಖ ಮತ್ತು ದುಃಖದ ದಿನಗಳನ್ನು ನಾವು ಅರಿತುಕೊಂಡು ಅದರಂತೆ ನಡೆದಾಗ ವ್ಯಕ್ತಿಯು ಸದಾ ಸುಖವಾಗಿರಲು ಸಹಾಯವಾಗಿರುತ್ತದೆ ದುಃಖದಲ್ಲಿಯೂ ಸಹ ಸುಖವಾಗಿರಲು ಆತನ ಸಮಚಿತ್ತದಿಂದ ಇರಲು ಸಹಾಯವಾಗುತ್ತದೆ.


ಈ ವಿಚಾರವನ್ನು ನಾವು ಎಲ್ಲಿ ಉಪಯೋಗಿಸಬಹುದು

ಇನ್ನು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೋಡಿದ್ದಲ್ಲಿ ಜಾತಕದ ಬುಧರ ಮೇಲೆ ಗೋಚಾರದ ಕೇತು ಬಂದಾಗ ಮನೆಯಲ್ಲಿನ ವಯಸ್ಕರ ಮಕ್ಕಳು ಪ್ರೀತಿ ಪ್ರೇಮದ ಬಲೆಯಲ್ಲಿ ಬಿಡುವುದು ಅಥವಾ ತನ್ನ ಸ್ನೇಹಿತರುಗಳೊಂದಿಗೆ ಅತಿಹೆಚ್ಚು ಸಾಮೀಪ್ಯವನ್ನು ಬಯಸುವುದು ಜರುಗುತ್ತಿರುತ್ತದೆ ಇದರಿಂದ ಪೋಷಕರು ಯಾವುದೇ ಭಯವನ್ನು ಬೀಳದೆ ಅವರಿಗೆ ಆ ಸಮಯಕ್ಕೆ ಬೇಕಾದಂತಹ ಜ್ಞಾನ ಮತ್ತು ಮಾಹಿತಿಯನ್ನು ನೀಡಿ ಅವರಿಗೆ ಹೆಚ್ಚು ಸಾಮಿಪ್ಯವನ್ನು ಕೊಟ್ಟಾಗ ಅವರು ದಾರಿ ತಪ್ಪುವುದರಿಂದ ಪಾರು ಮಾಡಬಹುದು.

ಇನ್ನು ಗಂಡ ಹೆಂಡತಿಯರ ಮಧ್ಯದಲ್ಲಿ ದೈಹಿಕ ಸುಖಕ್ಕೆ ಸಂಬಂಧಪಟ್ಟಹಾಗೆ ಅಥವಾ ಸಾಂಸಾರಿಕ ಸಾಮರಸ್ಯಕ್ಕೆ ಸಂಬಂಧಪಟ್ಟಹಾಗೆ ಕೆಲವೊಂದು ಮನಸ್ತಾಪಗಳು ಉಂಟಾಗುತ್ತಿರುತ್ತದೆ ಇವುಗಳನ್ನು ತಪ್ಪಿಸಲು ಈ ವಿಷಯವನ್ನು ಉಪಯೋಗಿಸಿ ಇರುವರ ಜಾತಕದಲ್ಲಿನ ಬುಧರ ಮೇಲೆ ಶುಭ ಗ್ರಹಗಳ ಗೋಚಾರದ ಸಂಯೋಗ ಉಂಟು ಉಂಟಾದಾಗ ಅವರಿಬ್ಬರ ನಡುವೆ ಇರುವಂತಹ ಮನಸ್ತಾಪಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಈ ವಿಷಯವನ್ನು ಮುಹೂರ್ತದ ವಿಷಯದಲ್ಲಿ ನೋಡಿ ನಿಷೇಕ ಸಮಯದಲ್ಲಿ ಜಾತಕದ ಬುದರಿಗೆ ಶುಭಗ್ರಹಗಳ ಸಂಯೋಗ ಗೋಚಾರದಲ್ಲಿ ಉಂಟಾದಾಗ ನಿಷೇಕ ಮುಹೂರ್ತವನ್ನು ಕೊಡಲು ದಂಪತಿಗಳ ನಡುವೆ ಅತಿ ಹೆಚ್ಚು ಸಾಮರಸ್ಯ ಉಂಟಾಗಲು ಸಹಾಯವಾಗುತ್ತದೆ.

ವ್ಯಕ್ತಿಯು ತಾನು ಅಂದುಕೊಂಡ ಕೆಲಸವನ್ನು ಸಾಧಿಸಲು ಅಥವಾ ತನ್ನ ಎದುರುಗಡೆ ಇರುವ ಯಾವುದೇ ವ್ಯಕ್ತಿಯನ್ನು ಸುಖಪಡಿಸಿ ಆತನ ಮನಸ್ಸನ್ನು ಸಂತೋಷಪಡಿಸಲು ಈ ವಿಷಯವನ್ನು ಬಳಸಿ ಕೆಲಸವನ್ನು ಮಾಡಬಹುದು ಗೋಚರದಲ್ಲಿ ಬುಧರಿಗೆ ಶುಭಗ್ರಹಗಳ ಸಂಯೋಗ ಉಂಟಾದಾಗ ಆತನು ಎದುರುಗಡೆ ಇರುವಂತಹ ವ್ಯಕ್ತಿಗಳ ಮನಸ್ಸು ಪಡಿಸಲು ಸುಲಭವಾಗುತ್ತದೆ.

Tags: No tags

Comments are closed.