Untitled-14 (2)

ಮುಹೂರ್ತ ನಿರ್ಣಯ : ಪ್ರದೋಷದ ಮಹತ್ವ

ಪ್ರದೋಷವೆಂದರೆ ಮುಸ್ಸಂಜೆಯೆಂಬುದು ಪ್ರಸಿದ್ಧವಾದ ಅರ್ಥ.

ಆದರೆ ಪಂಚಾಂಗದಲ್ಲಿ ಇದನ್ನು ಪಾರಿಭಾಷಿಕವಾಗಿ ಬಳಸಿದೆ. ಷಷ್ಠೀ ಚತುರ್ಥೀ ದ್ವಾದಶಿಗಳಂದು ಪ್ರದೋಷವಿರುವುದಾದರೂ ಪ್ರಸಿದ್ಧವಾದ ದ್ವಾದಶಿಯ ಪ್ರದೋಷವನ್ನು ಮಾತ್ರ ಇಲ್ಲಿ ಪರಿಚಯಿಸುತ್ತೇನೆ.

ರಾತ್ರೌ ಯಾಮದ್ವಯಾದರ್ವಾಕ್ ಸಪ್ತಮೀಸ್ಯಾತ್ ತ್ರಯೋದಶೀ |
ಪ್ರದೋಷ ಸತು ವಿಜ್ಞೇಯಃ ಸರ್ವವಿದ್ಯಾ ವಿಗರ್ಹಿತಃ ||


ಎಂಬ ವೃದ್ಧ ಗರ್ಗರ ಪ್ರಮಾಣ ವಾಕ್ಯದಂತೆ ರಾತ್ರಿ 02 ಯಾಮಗಳು ಮುಗಿಯುವುದಕ್ಕೆ ಮೊದಲೇ ತ್ರಯೋದಶಿಯು ಪ್ರಾರಂಭವಾದರೆ ಪ್ರದೋಷವೆಂದು ತಿಳಿಯಬೇಕು. ಪ್ರದೋಷಕಾಲದಲ್ಲಿ ವೇದಾದಿಗಳ ಅಧ್ಯಯನವನ್ನು ಮಾಡಬಾರದು. ದ್ವಾದಶಿಯಂದು ರಾತ್ರಿಯೇ ತ್ರಯೋದಶಿಯು ಒದಗುವುದರಿಂದ ದ್ವಾದಶಿಯಂದೇ ಪ್ರದೋಷವಿರುತ್ತದೆ. ಈ ಪ್ರದೋಷಕಾಲವು ಸೂರ್ಯಾಸ್ತಕ್ಕಿಂತ ಪೂರ್ವಾಪರಗಳಲ್ಲಿ ಸಾಮಾನ್ಯವಾಗಿ 03 ಗಂಟೆಗಳಿರುತ್ತದೆ. ದ್ವಾದಶಿಯಂದು ಸಾಯಂಕಾಲ 06 ಗಂಟೆಗೆ ಸೂರ್ಯಾಸ್ತವಾಗುವುದೆಂದು ಭಾವಿಸಿದರೆ ಮಧ್ಯಾಹ್ನ 03 ಗಂಟೆಯಿಂದ ರಾತ್ರಿ 09 ಗಂಟೆಯವರೆಗೆ ಪ್ರದೋಷವಿದೆಯೆಂದು ತಿಳಿಯಬಹುದು.

ದ್ವಾದಶಿಯಂದು ಹರಿವಾಸರವಿದ್ದರೆ ಅಂದು ಪ್ರದೋಷವಿರುವುದಿಲ್ಲ. ಏಕೆಂದರೆ ಅಂದು ಪ್ರಾತಃಕಾಲದಲ್ಲಿ ತಾನೇ ಪ್ರಾರಂಭವಾಗಿರುವ ದ್ವಾದಶಿಯು ರಾತ್ರಿ ಕಾಲದಲ್ಲಿ ಮುಂದುವರಿಯುವುದರಿಂದ ಯಾಮದ್ವಯದಲ್ಲಿ ತ್ರಯೋದಶಿ ಪ್ರವೇಶದ ಸಾಧ್ಯತೆ ಇರುವುದಿಲ್ಲ. ಅಂತಹಾ ಸಂದರ್ಭದಲ್ಲಿ ತ್ರಯೋದಶಿಯಂದೇ ರಾತ್ರಿಯಲ್ಲಿ ತ್ರಯೋದಶಿಯು ಸಿಗುವುದರಿಂದ ಅಂದೇ ಪ್ರದೋಷವಿರುವುದನ್ನು ಪಂಚಾಂಗದಲ್ಲಿ ಕಾಣಬಹುದಾಗಿದೆ. ಹೀಗೆಯೇ ಷಷ್ಠೀ ಅಥವಾ ಸಪ್ತಮಿಯಂದೂ ಪ್ರದೋಷವಿರುತ್ತದೆ.

Tags: No tags

Comments are closed.