Untitled-1 (10)

ಶ್ರೀ ವಿದ್ಯಾ ಸಾಧನೆಯ 3 ಮಾರ್ಗಗಳು

ಮೊದಲ ಮಾರ್ಗ

ಪ್ರಶ್ನೆ – ಕೌಲ ಮಾರ್ಗ ಎಂದರೇನು.?

ಉತ್ತರ : ಶ್ರೀ ವಿದ್ಯಾ ಸಾಧನೆಯಲ್ಲಿ 3 ಮಾರ್ಗಗಳಿವೆ ಅದರಲ್ಲಿ ಒಂದು ಕೌಲಮಾರ್ಗ.

ಈ ಕೌಲ ಪಥದಲ್ಲಿ = ಇದರಲ್ಲೂ ಎರಡು ಕವಲುಗಳಿವೆ.

  1. ದಕ್ಷಿಣ, 2.ವಾಮ.

ಈ ಮಾರ್ಗದಲ್ಲಿ, ಬಾಹ್ಯ ಆರಾಧನೆ ಮತ್ತು ಪಂಚ ಮಕಾರಗಳ (ಮಧ್ಯ, ಮಾಂಸ, ಮತ್ರ್ಯ, ಮುದ್ರ, ಮೈಥುನ) ಬಳಕೆಯಾಗುತ್ತದೆ.

ಮತ್ತು ಬಹುತೇಕ ನಮ್ಮ ಲೌಕಿಕ ಆಸೆ, ಆಕಾಂಕ್ಷೆಗಳ ಪೂರೈಕೆಗಾಗಿ ಶಕ್ತಿಯನ್ನಾರಾಧಿಸಲಾಗುತ್ತದೆ ಎಂದು ಹೇಳಲಾಗುತ್ತದೆ.ನಿಜವಾಗಿ ಹೇಳಬೇಕೆಂದರೆ, 

೧. ಮಾಂಸ ಭಕ್ಷಣ ಎಂದರೆ: ಖೇಚರಿ ಮುದ್ರ. ಮಾಂಸಲವಾದ ನಾಲಿಗೆಯನ್ನು ನುಂಗುವಂತೆ ಗಂಟಲಿನ ಒಳಭಾಗಕ್ಕೆ ಒಯ್ಯುವುದು.
೨. ಮತ್ಸ್ಯ : ಎಂದರೆ ನಮ್ಮ ಗಂಗ ಯಮುನ ಸರಸ್ವತಿ ಎಂದು ಕರೆಯಲಾಗುವ ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳಲ್ಲಿ ಪ್ರಾಣಾಯಾಮದ ಮೂಲಕ ಸಂಚರಿಸುವ ವಾಯು.
೩. ಮುದ್ರ : ಎನ್ನುವುದು ಪೂಜಾ ಸಮಯದಲ್ಲಿ ನಾವು ತೋರಿಸುವ ಮುದ್ರೆಗಳು.
೪. ಮೈಥುನ :ಎಂದರೆ ಧ್ಯಾನ ಮತ್ತು ಸಾಧನೆಯ ಮೂಲಕ ನಮ್ಮ ಎಡ(ಪುರುಷ) ಮತ್ತು ಬಲ(ಸ್ತ್ರೀ) ಮಸ್ತಿಷ್ಕಗಳ ಒಂದಾಗುವಿಕೆ.

೫. ಮಧ್ಯ : ಎನ್ನುವುದು ಇವೆಲ್ಲ ಸಾಧನೆಗಳನ್ನು ಮಾಡುವಾಗ ನಮ್ಮ ಲಲನಾ ಗ್ರಂಥಿಯು ಚೇತನಗೊಂಡು ಅದರಿಂದ ಸ್ರವಿಸುವ ಮಾದಕ ಮತ್ತು ಸಮಾಧಿ ಸ್ಥಿತಿಗೊಯ್ಯುವಂತಹ ದ್ರವ.

ಇದು ದಕ್ಷಿಣಾಪಂತಿಗಳು ಅನುಸರಿಸುವ ಮಾರ್ಗ.

ಇನ್ನೂ ವಾಮ ಪಂತಿಗಳು ಇವೆಲ್ಲವನ್ನೂ ಅದರ ಪದದ ನಿಜ ರೂಪದಲ್ಲಿ ಅನುಸರಿಸುವರು.
ಈ ಪಥ ಸ್ವಲ್ಪ ಕಠಿಣವೂ ಹೌದು. ಇದರಲ್ಲಿ ಎಡವುವ ಸಾಧ್ಯತೆಗಳು ಜಾಸ್ತಿ.

02 ನೇ ಮಾರ್ಗ

ಪ್ರಶ್ನೆ : ಸಮಯಾಚಾರ ಎಂದರೇನು.?

ಉತ್ತರ : ಸಹ =ಸಂಗಡ. ಮಯಾ = ನನ್ನ, ಎಂದರೆ = ಸದಾ ನನ್ನ ಸಂಗಡ.

ದಿನದ ಒಂದು ನಿರ್ಧಿಷ್ಟ ಸಮಯದಲ್ಲಿ ಮಾತ್ರ ಪೂಜಿಸಿ, ನೆನಪಿಸಿಕೊಳ್ಳುವುದಲ್ಲದೇ, ಸದಾ ನನ್ನೊಡನೆಯೇ ಇರತಕ್ಕ  ಚೈತನ್ಯ.

ಸಮಯಾ ಎನ್ನುವ ಪದವೇ ಸೂಚಿಸುವಂತೆ  ಐಖ್ಯತ,ಆ ಚೈತನ್ಯವೂ, ಈ ಚೈತನ್ಯವೂ ಒಂದೇ ಎಂಬ ಅವಿನಾಭಾವ.
ಇದು  ಒಂದು ಸಾಧನೆಯ ಮಾರ್ಗ ಎಂದೆನಿಸುವುದಿಲ್ಲ. ಸಾಧನೆಯ ಹಾದಿಯಲ್ಲಿ ಮುಂದುವರೆದಂತೆ ಸಾಧಕನು ತಲುಪುವ ಒಂದು ಸ್ಥಿತಿ.

ಮಿಶ್ರದಲ್ಲಿ ಶುರುವಾದ ಸಾಧನ, ಸಮಯದಲ್ಲಿ ಅಂತ್ಯವಾಗುತ್ತದೆ.ಇದು ಎಲ್ಲವನ್ನೂ ಮೀರಿ ನಿಂತ ಐಕ್ಯತಾ ಭಾವ. ಆದರೆ ಇದು ಸಾಧನೆಯ ಕೊನೆಯ ಹಂತವೇ ವಿನಃ ಆರಂಭದಲ್ಲಿ ನಿರ್ಗುಣೋಪಾಸನೆ ಸಾಧಿಸುವವರಿಗೆ ಅತ್ಯಂತ ಸುಲಭ.

ಇದು ತನ್ನೊಳಗೇ ತಾನು ತನ್ನನ್ನು ಕಂಡುಕೊಳ್ಳುವ ಪ್ರಯತ್ನ.

ಬಾಹ್ಯ ಪೂಜಾವಿಧಿಯ ಪರಿಣಾಮವೂ, ಅಂತರ್ಯಾಗವೂ ಒಂದೇ ಫಲ ನೀಡುವುದರಿಂದ ಯಾವ ಪಥದಲ್ಲಿ ಮುಂದುವರೆದರೂ ಏನೂ ಅಡ್ಡಿಯಿಲ್ಲ.

ಸಮಯ ಮಾರ್ಗವನ್ನನುಸರಿಸುವುದರಿಂದ, ನಾವು ಎಲ್ಲಿದ್ದರಲ್ಲಿ ಯಾವ ಬಾಹ್ಯ ಪರಿಕರಣಗಳ ಅವಶ್ಯಕತೆ ಇಲ್ಲದೆ, ಕಾಲ, ದೇಶಗಳ ಪರಿವೆ ಇಲ್ಲದೆ ನಮ್ಮ ಸ್ವಸ್ವರೂಪದೆಡೆಗೊಯ್ಯುವ ಉತ್ತಮವಾದ ಮಾರ್ಗವೇ ಸಮಯಾಚಾರ.

03 ನೇ ಮಾರ್ಗ

ಪ್ರಶ್ನೆ – ಮಿಶ್ರಪಥ ಎಂದರೇನು.?

ಉತ್ತರ -ಶ್ರೀ ವಿದ್ಯಾ ಅನುಷ್ಠಾನ  ಸಾಧನೆಯಲ್ಲಿ ಇರುವ 3ನೇ ಮಾರ್ಗ ಮಿಶ್ರಪಥ

ಇಲ್ಲಿ ಬಾಹ್ಯವೂ ಇದೆ, ಅಂತರ್ಯಾಗವೂ ಇದೆ.ಇಲ್ಲಿ ಭಕ್ತಿಯೂ ಇದೆ, ಬೇಡಿಕೆಯೂ ಇದೆ.ಮತ್ತು ಪಂಚ ಮಕಾರಗಳ ಬದಲಿಗೆ ಪಂಚ ತತ್ವಗಳ ಬಳಕೆಯಾಗುತ್ತದೆ.ಇದು ಎಲ್ಲರಿಗೂ ಹಿಡಿಸುವಂತಹ ಮತ್ತು ಸುಲಭವಾಗಿ ಸಾಧಿಸಬಲ್ಲ ಹಾದಿಯಾಗಿದೆ.

ಉದಾಹರಣೆಗೆ – ಪೂಜೆ ಎಂದರೆ ಹೂವು, ಹಣ್ಣುಗಳು, ದೀಪ, ಧೂಪ, ಗಂಧ ಮತ್ತು ನೈವೇಧ್ಯ. ಇದೆಲ್ಲ ಪಂಚ ತತ್ವಗಳ ಪ್ರತೀಕ ಎಂದು ಅರಿವಿದ್ದರೂ, ಅದರಿಂದ ಮೇಲೇರಿ ನಿರಾಕಾರ ಚೈತನ್ಯವನ್ನು ಕಲ್ಪಿಸಿಕೊಳ್ಳಲು ಸ್ವಲ್ಪ ಕಷ್ಟಸಾಧ್ಯವಾಗಬಹುದು.

ಎದುರಿಗಿರುವ ರೂಪ ರೇಶೆಗಳಿಂದ ಕೂಡಿದ ವಸ್ತುವಿನ ಮೇಲೇ ಏಕಾಗ್ರ ಮಾಡಲಾಗುವುದಿಲ್ಲ, ಇನ್ನು ನಿರಾಕಾರದ ಮೇಲೆ ಹೇಗೆ ಮನಸನ್ನು ನಿಲ್ಲಿಸಲು ಸಾಧ್ಯ?

ಒಮ್ಮೆ ಆ ವಸ್ತುವಿನ ರೂಪ, ಗುಣ, ಅದರ ಶಕ್ತಿ ಎಲ್ಲದರ ಅಚ್ಚು ಮನದೊಳಗಿಳಿಯಿತೆಂದರೆ ಅದನ್ನು ಊಹಿಸಿಕೊಳ್ಳಲು ಅದರ ಪ್ರತಿರೂಪ ನಮ್ಮೆದುರಿಗೆ ಇರಬೇಕಾಗಿಲ್ಲ.
ಇದ್ದರೂ ಅದರ ಹಿಂದಿನ ಗೂಡಾರ್ಥವನ್ನು ಮನಸ್ಸು ಅರ್ಥೈಸಿಕೊಳ್ಳುತ್ತದೆ.

ಆ ಸ್ಥಿತಿಗೆ ತಲುಪಿದಾಗ. ನಮಗೂ ನಿರಾಕಾರ, ನಿರ್ಗುಣ ಬ್ರಹ್ಮನನ್ನು ಉಪಾಸಿಸಲು ಸಾಧ್ಯ. ಇದೇ ಮಿಶ್ರಪದ್ಧತಿ ಸಾಧನೆಯ ಮೊದಲ ಹಂತ..

ಇಲ್ಲಿ ಸಾಧನೆಗಳ ಮುಖ್ಯ ಗುರಿ ಪರಿಪೂರ್ಣತೆ, ಮತ್ತು ಅತ್ಮ ಸಾಕ್ಷಾತ್ಕಾರವಾದುದರಿಂದ ಯಾವ ಮಾರ್ಗವನ್ನನುಸರಿಸಿದೆವು ಎನ್ನುವುದು ಗೌಣ. ಆದುದರಿಂದ ನಾನು ಮಾಡುತ್ತಿರುವುದು ಸರಿ, ಅವರದು ತಪ್ಪು ಎನ್ನುವ ಪ್ರಶ್ನೆ ಏಳುವುದೇ ಇಲ್ಲ.

ಈ ಮಿಶ್ರ ಪದ್ಧತಿಯಿಂದ ಅನೇಕ ಪ್ರಯೋಜನಗಳಿವೆ.
ಪೂಜೆಯಲ್ಲಿ ಉಪಯೋಗಿಸುವ ಬಣ್ಣ ಬಣ್ಣದ ಹೂವುಗಳು, ಸುಗಂದ ದೂಪ, ಮತ್ತು ಛಂದೋಭದ್ದವಾದ ಮಂತ್ರಗಳ ಉಚ್ಚಾರಣೆ ಇವುಗಳೆಲ್ಲಾ ನಮ್ಮ ಬಲ ಮಸ್ತಿಷ್ಕವನ್ನು ಉತ್ತೇಜಿಸಿ ತನ್ಮೂಲಕ ನಮ್ಮ ಅಂತದೃಷ್ಟಿ ಯನ್ನು ಜಾಗ್ರತಗೊಳಿಸುತ್ತದೆ.ಹಾಗಾಗಿ ಜನಸಾಮಾನ್ಯರು ಎಲ್ಲರೂ ಈ ಮಿಶ್ರಪಂಥವನ್ನೇ  ಶ್ರೀ ವಿದ್ಯಾ ಸಾಧನೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ…

Tags: No tags

Add a Comment

Your email address will not be published. Required fields are marked *